ಜಿಲ್ಲೆ

ಕದ್ದ ಆಭರಣ ಮಾರುವಾಗ ಸಿಕ್ಕಿಬಿದ್ದ ಕಳ್ಳರು

ಚನ್ನಗಿರಿ: ಕಳವು ಮಾಡಿದ್ದ ಆಭರಣಗಳನ್ನು ಮಾರಾಟ ಮಾಡಲು ಹೋಗಿದ್ದಾಗ ಇಬ್ಬರು ಕಳ್ಳರು ಶನಿವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಚನ್ನಗಿರಿ ಟೌನ್ ವಾಸಿ ಅಮ್ಜದ್‌ಖಾನ್, ಸುಹೀಲ್‌ಖಾನ್ ಬಂಧಿತ ಆರೋಪಿಗಳು. ಸಂತೇಬೆನ್ನೂರಲ್ಲಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳಿಂದ 4.02 ಲಕ್ಷ ರೂ. ಮೊತ್ತದ ಆಭರಣ, ಬೈಕ್ ವಶಪಡಿಸಿಕೊಂಡಿದ್ದಾರೆ.

ಡಿಎಸ್‌ಪಿ ಪ್ರಶಾಂತ್ ಮನ್ನೋಳಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಆರ್.ಆರ್.ಪಾಟೀಲ್, ಪಿಎಸ್‌ಐ ಎಸ್.ಎಸ್.ಮೇಟಿ, ಅಪರಾಧ ಪಿಎಸ್‌ಐ ರೂಪ್ಲಿಬಾಯಿ, ಸಿಬ್ಬಂದಿ ಇದ್ದರು.