ಚನ್ನಗಿರಿ: ತಾಲೂಕಿನ ವಿವಿಧೆಡೆ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಎರಡು ಮನೆಗಳು ಕುಸಿದು ಬಿದ್ದಿದ್ದು, ಅಂದಾಜು 2 ಲಕ್ಷ ರೂ.ನಷ್ಟವಾಗಿದೆ. ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುತ್ತದೆ ಎಂದು ತಹಸೀಲ್ದಾರ್ ಪಿ.ಎಸ್.ಯರಿಸ್ವಾಮಿ ಗುರುವಾರ ತಿಳಿಸಿದರು.
ತಾಲೂಕಿನ ಗುಳ್ಳೇಹಳ್ಳಿ ತಾಂಡಾ ಹಾಗೂ ಬುಳಸಾಗರ ಗ್ರಾಮದಲ್ಲಿ ತಲಾ ಒಂದು ಮನೆ ಬಿದ್ದಿವೆ. ನಿರಂತರ ಮಳೆ ಕಾರಣ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರ ರಜೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.
ಕೆರೆಬಿಳಚಿಯಲ್ಲಿ ಅಧಿಕ ಮಳೆ: ಚನ್ನಗಿರಿ 6.6 ಮಿಮೀ, ದೇವರಹಳ್ಳಿ 8.6, ಕತ್ತಲಗೆರೆ 12.1, ತ್ಯಾವಣಗಿ 7.4, ಬಸವಾಪಟ್ಟಣ 6.2, ಜೋಳದಾಳು 3.0, ಸಂತೇಬೆನ್ನೂರು 8.2, ಉಬ್ರಾಣಿ 19.2, ಕೆರೆಬಿಳಚಿ 44.8 ಸೇರಿ 116.1 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.