ಜಿಲ್ಲೆ

ಚನ್ನಗಿರಿ ತಾಲೂಕಿನ ಎರಡು ಕಡೆ ಮನೆಗೆ ಭಾಗಶಃ ಹಾನಿ

Davangere - Desk - Basavaraja P

ಚನ್ನಗಿರಿ: ಧಾರಾಕಾರವಾಗಿ ಸುರಿದ ಮಳೆಗೆ ತಾಲೂಕಿನ ಎರಡು ಗ್ರಾಮಗಳಲ್ಲಿ ಮನೆಗಳು ಭಾಗಶಃ ಕುಸಿದಿವೆ.

ನವಿಲೇಹಾಳು ಗ್ರಾಮದ ಅಬ್ದುಲ್ ರೆಹಮಾನ್ ಎಂಬವರ ಮನೆ ತಗಡುಗಳು ಗಾಳಿಗೆ ಹಾರಿ ಹೋಗಿವೆ, ಮಾದೇನಹಳ್ಳಿ ಗ್ರಾಮದ ಶಂಕರಮ್ಮ ಎಂಬವರ ಮನೆ ಗೋಡೆ ಕುಸಿದು ಬಿದ್ದಿದೆ.

ಯಾವುದೇ ಜೀವಹಾನಿ ಸಂಭವಿಸಿಲ್ಲ ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುತ್ತದೆ ಎಂದು ತಹಸೀಲ್ದಾರ್ ಪಿ.ಎಸ್.ಯರಿಸ್ವಾಮಿ ತಿಳಿಸಿದ್ದಾರೆ.

ಮಳೆ ವರದಿ: ಚನ್ನಗಿರಿ 30.6 ಮಿ.ಮೀ., ದೇವರಹಳ್ಳಿ 30.2, ಕತ್ತಲಗೆರೆ 32.4, ತ್ಯಾವಣಗಿ 18.8, ಬಸವಾಪಟ್ಟಣ 30.4, ಜೋಳದಾಳು 28.4, ಸಂತೇಬೆನ್ನೂರು 27.0, ಉಬ್ರಾಣಿ 42.4 ಹಾಗೂ ಕೆರೆಬಿಳಚಿಯಲ್ಲಿ 30.2 ಸೇರಿ ಸರಾಸರಿ 270.4 ಮಿ.ಮೀ. ಮಳೆ ದಾಖಲಾಗಿದೆ.