ಜಿಲ್ಲೆ

ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ವಿದ್ಯುತ್ ತಂತಿ, ಸುಟ್ಟುಕರಕಲಾದ ವಾಹನ: ಚಾಲಕ ಗ್ರೇಟ್ ಎಸ್ಕೇಪ್

Chitradurga

ಚನ್ನಗಿರಿ: ತಾಲೂಕಿನ ಹರೋನಹಳ್ಳಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ವಿದ್ಯುತ್ ತಂತಿ ಬಿದ್ದು ವಾಹನ ಸುಟ್ಟು ಕರಕಲಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಬುಧವಾರ ರಾತ್ರಿ ಸುರಿದ ಜೋರು ಮಳೆಗೆ ರಸ್ತೆ ಬಳಿ ಮರವೊಂದು ತಂತಿ ಮೇಲೆ ಬಿದ್ದು, ತಂತಿ ತುಂಡಾಗಿ ಚಿತ್ರದುರ್ಗದಿಂದ ಭದ್ರಾವತಿ ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ಬಿದ್ದಿದ್ದೆ. ಚಾಲಕ ತಕ್ಷಣ ಹೊರ ಬಂದಿದ್ದು, ಅಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ.

ಭಾರಿ ಮಳೆಯಿಂದ ತಾಲೂಕಿನಲ್ಲಿ ವಿವಿಧೆಡೆ ಒಟ್ಟು 16 ಮನೆಗಳು ಬಿದ್ದಿದ್ದು, 12 ಲಕ್ಷ ರೂ. ನಷ್ಟವಾಗಿದೆ. ಬಸವಾಪುರ ಗ್ರಾಮದಲ್ಲಿ ಫಸಲಿಗೆ ಬಂದಿದ್ದ 20 ಎಕರೆ ಭತ್ತ ಬೆಳೆಗೆ ನೀರು ನುಗ್ಗಿದೆ. ಚಿಕ್ಕಮಳಲಿ ಗ್ರಾಮದಲ್ಲಿ 40 ಎಕರೆ ಮೆಕ್ಕೆಜೋಳ ನಷ್ಟವಾಗಿದ್ದು, ಒಟ್ಟು 2.20 ಲಕ್ಷ ರೂ. ನಷ್ಟವಾಗಿದೆ. ನಾರಶೆಟ್ಟಿಹಳ್ಳಿ, ಹೊನ್ನೇಬಾಗಿ, ದಿಗ್ಗೇನಹಳ್ಳಿ, ಪಮಡೋಮಟ್ಟಿ ಸೇರಿ ಅನೇಕ ಗ್ರಾಮಗಳಲ್ಲಿ ನೂರಾರು ಎಕರೆ ಅಡಕೆ ತೋಟದಲ್ಲಿ ನೀರು ನಿಂತಿದೆ. ತಾಲೂಕಿನಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ ಎಂದು ತಹಸೀಲ್ದಾರ್ ಡಾ.ಪಟ್ಟರಾಜಗೌಡ ತಿಳಿಸಿದ್ದಾರೆ.