ಚನ್ನಗಿರಿ: ವಿಶ್ವವಿದ್ಯಾಲಯಗಳು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಎನ್‌ಎಸ್‌ಯುಐ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಒಕ್ಕೂಟದ ತಾಲೂಕು ಉಪಾಧ್ಯಕ್ಷ ಜಿ.ವಿ.ರುದ್ರೇಶ್ ಮಾತನಾಡಿ, ಪದವಿ ಕಾಲೇಜಿನಲ್ಲಿ ಕ್ಯಾರಿ ಓವರ್ ಸಿಸ್ಟಮ್ ಇರುವ ಕಾರಣದಿಂದ ಪ್ರಥಮ ವರ್ಷದಲ್ಲಿ ಅನುತ್ತೀರ್ಣರಾದರೂ ಅಂತಿಮ ವರ್ಷದವರೆಗೆ ಹೋಗಲು ಅವಕಾಶ ಇದೆ. ಆದರೆ, ಐದು ಮತ್ತು ಆರನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗಳಿಗೆ ಬೋರ್ಡ್ ಒಂದು ತಿಂಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದಂತೆ ನಮಗೆ ನೀಡಿದರೆ ಅನುತ್ತೀರ್ಣ ವಿದ್ಯಾರ್ಥಿಗಳು ಒಂದು ವರ್ಷ ವ್ಯರ್ಥ ಆಗುವುದು ತಪ್ಪುತ್ತದೆ ಎಂದು ಹೇಳಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ನಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ, ಐದನೇ ಸೆಮಿಸ್ಟರ್‌ನಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡರೆ ಮುಂದೆ ವ್ಯಾಸಂಗ ಮಾಡಲು ಅವಕಾಶ ಸಿಗುವುದಿಲ್ಲ. ಬೇರೆ ವಿವಿಗಳು ವಿದ್ಯಾರ್ಥಿಗಳ ವ್ಯಾಸಂಗದ ಭವಿಷ್ಯ ಉತ್ತಮವಾಗಿ ಇರಬೇಕು ಎಂದು ಫಲಿತಾಂದ ಬಂದ ಹಿಂದೆಯೇ ಮರು ಪರೀಕ್ಷಗೆ ಅವಕಾಶ ನೀಡಿದೆ. ಅದರಂತೆ ದಾವಣಗೆರೆ ವಿಶ್ವವಿದ್ಯಾಲಯ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ಕಾರ್ಯಕರ್ತರಾದ ಪಿ.ಕೆ.ಸಿಂಧು, ಕೆ.ವಿ.ಯೋಗಿ, ಪವನ್‌ಕುಮಾರ್, ಕುಬೇರ, ಬಿ.ಎನ್.ಸಂಜು, ಎಂ.ಇ. ರಾಘವೇಂದ್ರ, ಎಸ್.ತೇಜು, ಎ.ಕೆ.ಮನುಕುಮಾರ್, ಎಂ.ಹೇಮಂತ, ಬಿ.ಪಿ.ಚೇತನ್, ಡಿ.ಎಸ್.ವರುಣ್, ಕೆ.ಎಸ್.ನಿಕೀಲ್, ರಾಧಿಕ, ಅಮೃತ, ರಕ್ಷಿತ, ಗಗನ, ನಯನ ಇದ್ದರು.