ತಾಳಿಕೋಟೆಯಲ್ಲಿ ನಿಜಗುಣ ಶಿವಯೋಗಿಗಳ ಪಲ್ಲಕ್ಕಿ ಉತ್ಸವಕ್ಕೆ ಗಣ್ಯರು, ಶ್ರೀಗಳು ಚಾಲನೆ ನೀಡಿದರು. ಚನ್ನಬಸವ ಸ್ವಾಮಿಗಳು, ಲಿಂಗಾನಂದ ಸ್ವಾಮಿಗಳು, ಇಂದುದರ ಸ್ವಾಮಿಗಳು, ಎಸ್.ಎಂ.ಬೇನಾಳಮಠ ಇತರರಿದ್ದರು.  
ಜಿಲ್ಲೆ

ವಚನಗಳನ್ನು ಅರಿಯಬೇಕು

ತಾಳಿಕೋಟೆ: ಪಟ್ಟಣದಲ್ಲಿ 30, 40 ವರ್ಷಗಳ ಹಿಂದೆ ನಿಜಗುಣ ಶಿವಯೋಗಿಗಳ ಶಾಸ ಸಮಿತಿ ರಚನೆಯಾಗಿದ್ದು, ದಿನನಿತ್ಯ ಪ್ರವಚನವನ್ನು ಭಕ್ತ ಸಮೂಹಕ್ಕೆ ಉಣಬಡಿಸುತ್ತ ಸಾಗಿರುವುದು ಶ್ಲಾಘನೀಯ ಎಂದು ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವ ಸ್ವಾಮಿಗಳು ಹೇಳಿದರು.

ಸ್ಥಳೀಯ ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ನಿಜಗುಣ ಶಿವಯೋಗಿಗಳ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಪಲ್ಲಕ್ಕಿ ಉತ್ಸವ, ಧರ್ಮ ಸಭೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶರೀರಕ್ಕೆ ಸಂಸ್ಕಾರ ಕೊಡಬೇಕು, ಬಸವಣ್ಣನವರು, ಅಕ್ಕಮಹಾದೇವಿ, ಯಡಿಯೂರ ಸಿದ್ಧಲಿಂಗ ದೇವರು, ಖಾಸ್ಗತರು, ಹೇಮರಡ್ಡಿ ಮಲ್ಲಮ್ಮರ ವಚನಗಳನ್ನು ಅರಿಯಬೇಕು ಎಂದರು.

ಕಿತ್ತೂರು ತಾಲೂಕಿನ ಹಲಕಟ್ಟಿ ಆಶ್ರಮದ ಲಿಂಗಾನಂದ ಸ್ವಾಮಿಗಳು, ಗಡಿ ಸೋಮನಾಳ ಹಿರೇಮಠದ ಇಂದುದರ ಸ್ವಾಮಿಗಳು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಿಜಗುಣ ಶಿವಯೋಗಿಗಳ ಆನಂದಾಶ್ರಮದ ವೇ.ಎಸ್.ಎಂ.ಬೇನಾಳಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ನಿಜಗುಣರ ಆಶ್ರಮದಿಂದ ಪ್ರಾರಂಭಗೊಂಡ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಖಾಸ್ಗತೇಶ್ವರ ಮಠಕ್ಕೆ ತೆರಳಿತು.

ನಂತರ ಅದೇ ಭವ್ಯ ಮೆರವಣಿಗೆ ಆನಂದಾಶ್ರಮಕ್ಕೆ ತೆರಳಿ ಧರ್ಮ ಸಭೆಯಾಗಿ ಮಾರ್ಪಟಿತು.

ಕಳೆದ ನ.16 ರಿಂದ 24 ರವರೆಗೆ ನಡೆದ ಪ್ರವಚನ ಕಾರ್ಯಕ್ರಮವನ್ನು ಗದಗಿನ ಕದಳಿವನಮಠದ ಅಕ್ಕಮಹಾದೇವಿ ಮಂಗಲಗೊಳಿಸಿದರು.

ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಹಾಗೂ ಶಾಸ ಸಮಿತಿಗೆ ಪಲ್ಲಕ್ಕಿಯನ್ನು ಸಲ್ಲಿಸಿದ ನಾಗರತ್ನಾ ಲೋಕರೆ, ಆರ್.ಬಿ.ದಾನಿ, ಸುಮಂಗಲಾ ಕೊಳೂರ, ಸತ್ಯನಾರಾಯಣಸಿಂಗ್ ವಿಜಾಪೂರ, ಅಂಬ್ರೇಶ ಕೋರಿ, ಗೋವಿಂದಸಿಂಗ್ ಮೂಲಿಮನಿ, ಶರಣಗೌಡ ಬಿರಾದಾರ, ಅಮ್ರಪ್ಪ ಹೂಗಾರ, ಶಿವಶಂಕರಪ್ಪ ಪೂಜಾರಿ, ಶಕುಂತಲಾ ಹಿರೇಮಠ, ಉಮಾ ಘೀವಾರಿ, ಡಾ.ಹೇಮಾವತಿ ದುರ್ಗದಮಠ, ಕಾಶಿಬಾಯಿ ಅಡಗಿಮನಿ, ಸುಭದ್ರಾ ಗೌಡಗೇರಿ ಇತರರಿದ್ದರು. ಆರ್.ಬಿ.ದಾನಿ ಸ್ವಾಗತಿಸಿ ನಿರೂಪಿಸಿದರು.