ಡಂಬಳ: ರಕ್ತದೊತ್ತಡ, ಸಕ್ಕರೆ ಕಾಯಿಲೆ ಬಗ್ಗೆ ನಿಷ್ಕಾಳಜಿ ಸಲ್ಲದು. ಬದಲಾದ ಜೀವನ ಶೈಲಿಯಿಂದ ಗ್ರಾಮೀಣ ಭಾಗದಲ್ಲೂ ವಿವಿಧ ಕಾಯಿಲೆಗಳು ಹೆಚ್ಚುತ್ತಿವೆ. ಅವುಗಳ ಕುರಿತು ತಪಾಸಣೆ, ಅರಿವು ಅಗತ್ಯ ಎಂದು ಜಿಲ್ಲಾ ಸಮೀಕ್ಷಾಣಾಧಿಕಾರಿ ವೆಂಕಟೇಶ ರಾಥೋಡ ಹೇಳಿದರು.
ಸಮೀಪದ ಮೇವುಂಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಯುಷ್ಮಾನ್‌ಭವ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಜಿ. ನಿಡಗುಂದಿ, ಡಾ. ಸವೀತಾ ನಿಡಗುಂದಿ, ಪಿಡಿಒ ಸಂತೋಷ ಹೂಗಾರ, ಸಂತೋಷ ಎಂ., ಮಂಜುನಾಥ ಕಳಸಾಪೂರ, ಪ್ರವೀಣ ರೆಡ್ಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ದುರಗಮ್ಮ ತಳಗೇರಿ, ಉಪಾಧ್ಯಕ್ಷೆ ಸತ್ಯಮ್ಮ ಉದಂಡಿ, ಸದಸ್ಯ ಹಾಲಪ್ಪ ಮೇಟಿ, ಶರಣಪ್ಪ ಕರಿಗಾರ, ನಾಗಪ್ಪ ಕೊರ್ಲಹಳ್ಳಿ, ಮಲ್ಲವ್ವ ಹಾರೋಗೇರಿ, ಜ್ಯೋತಿ ತಾರಿಕೊಪ್ಪ, ಶಿವಲೀಲಾ ಅಮರಗೋಳ, ಡಾ ವಚನಾಂಬಿಕ, ಡಾ. ಸಲಿಂ, ಸಿಎಚ್‌ಒ ವೀಣಾ ಹೊಸಳ್ಳಿ, ಉದಯ ಎಂ, ಬಸಮ್ಮ ಕರಮುಡಿ, ಮಂಜಳಾ ಬಾಣಕಾರ, ಕಮಲಾಕ್ಷಿ ಹೂಲಗೇರಿ, ಬಡಿಮಾ ಶೇಖ, ಶೈಲಾ ಕೊಣನವರ ಇತರರಿದ್ದರು.