ಜಿಲ್ಲೆ

ಪರಿಸ್ಥಿತಿಗಿಂತ ಮನಸ್ಥಿತಿ ಬದಲಾಯಿಸಿಕೊಳ್ಳಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಪರಿಸ್ಥಿತಿಗಿಂತ ನಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಸಾಧನೆಯ ಪಥದಲ್ಲಿ ಮುನ್ನೆಡೆಯಬೇಕು. ಅಂದಾಗಲೇ ಅತ್ಯುತ್ತಮವಾದುದನ್ನು ಸಾಧಿಸಬಹುದು ಎಂದು ಉಪನ್ಯಾಸಕ ಮಹೇಶ ಮಾಶಾಳ ಹೇಳಿದರು.

ನಗರದ ಮಾಳಮಡ್ಡಿ ಕೆ.ಇ. ಬೋರ್ಡ್​ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳು ಯಾಂತ್ರಿಕ ಪಠ್ಯ ಅಭ್ಯಾಸ ಮಾಡದೆ ನಿಮ್ಮೊಳಗೆ ಅಡಗಿರುವ ಅಗಾಧ ಪ್ರತಿಭೆ ಹೊರಸೆಳೆಯುವ ನಿಟ್ಟಿನಲ್ಲಿ ಅದ್ಭುತವನ್ನು ಸಾಧಿಸಬೇಕು. ಮಕ್ಕಳ ಮನೋಭೂಮಿಕೆ ಅರಿತು ಅವರ ಸಾಧನೆಗೆ ಶಿಕ್ಷಕರು ಹಾಗೂ ಪಾಲಕರು ಬೆಂಬಲವಾಗಿ ನಿಲ್ಲಬೇಕು. ವಿನಾಕಾರಣ ಮಕ್ಕಳ ಮೇಲೆ ಒತ್ತಡ ಹಾಕಬಾರದು ಎಂದರು.

ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಡಾ. ಕೃಷ್ಣ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯೆ ಸುನಿತಾ ಕಡಪಟ್ಟಿ, ಬಿ.ಎಚ್​.ಆರೇರ, ಇತರರು ಇದ್ದರು.

ಎನ್​. ಎಸ್​. ಗೋವಿಂದರಡ್ಡಿ ಸ್ವಾಗತಿಸಿದರು. ಅಭಿನಂದನ. ಬಿ. ಹಾಗೂ ರೋಹಿಣಿ ಚಿಲಮಿ ನಿರೂಪಿಸಿದರು. ಪ್ರಕಾಶ ಕವಲಿ ವಂದಿಸಿದರು.