ನಗರದ ಭಾರತೀಯ ವಿದ್ಯಾ ಭವನದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಗೊಂಬೆ ಪ್ರದರ್ಶನದಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು.  folder
ಜಿಲ್ಲೆ

ಪುಸ್ತಕ ಅಧ್ಯಯನದಿಂದ ಬದಲಾವಣೆ ಸಾಧ್ಯ

ಭಾರತೀಯ ವಿದ್ಯಾ ಭವನದಿಂದ ಪ್ರಕಾಶನಗೊಂಡಿರುವ ಪುಸ್ತಕಗಳ ಅಧ್ಯಯನ ನಡೆಸಿದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೆಂಗಳೂರು: ಭಾರತೀಯ ವಿದ್ಯಾ ಭವನದಿಂದ ಪ್ರಕಾಶನಗೊಂಡಿರುವ ಪುಸ್ತಕಗಳ ಅಧ್ಯಯನ ನಡೆಸಿದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಗರದ ಭಾರತೀಯ ವಿದ್ಯಾ ಭವನದಲ್ಲಿ ನವರಾತ್ರಿ ಪ್ರಯುಕ್ತ ಆಯೋಜನೆ ಮಾಡಿರುವ ಗೊಂಬೆ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ನಮ್ಮ ತಂದೆ ಕಾಲದಿಂದಲೂ ಭವನದೊಂದಿಗೆ ನಿಟಕ ಸಂಪರ್ಕವಿದೆ. ಇಲ್ಲಿ ಪ್ರಕಾಶನಗೊಂಡಿರುವ ಪುಸ್ತಕಗಳ ಗ್ರಂಥಾಲಯವೇ ಮನೆಯಲ್ಲಿದೆ ಎಂದರು.

ಕೆ.ಜಿ. ರಾವನ್​ ಸೇರಿ ಹಲವು ಗಣ್ಯರು ಬರೆದಿರುವ ರಾಮಾಯಣ, ಮಹಾಭಾರತ ಸೇರಿ ಪುಸ್ತಕಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಓದಿ ಹಲವು ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದೇನೆ. ನನ್ನ ರಾಜಕೀಯ ಹಾದಿಗೂ ದಾರಿ ತೋರಿವೆ ಎಂದು ತಿಳಿಸಿದರು.

ಸಮಾಜದಲ್ಲಿ ಚರ್ಚೆಗೆ ಬಾರದೆ ಇರುವ ವಿಚಾರಗಳು ಇಲ್ಲಿನ ಪುಸ್ತಕಗಳಲ್ಲಿ ಕಾಣಬಹುದು. ಅವುಗಳನ್ನು ನಾನಾ ಅಯಾಮಗಳಲ್ಲಿ ಓದಿದಾಗ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಸಂಸತ್​ನಲ್ಲಿ ಧ್ವನಿ ಎತ್ತಲು ಭಾರತೀಯ ವಿದ್ಯಾ ಭವನ ಸ್ಪೂರ್ತಿ ನೀಡಿದೆ. ಭಾರತೀಯ ಸಂಸತಿ, ಸಂಪ್ರದಾಯವನ್ನು ಪ್ರತಿಬಿಂಬಿಸುವ ಹಬ್ಬಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಸಂಸದರು ವಿವರಿಸಿದರು.

ಕಾರ್ಯಕ್ರಮದಲ್ಲಿ ಭವನದ ಅಧ್ಯಕ್ಷ ಕೆ.ಜಿ. ರಾವನ್​ ನಿರ್ದೇಶಕ ಎಚ್​.ಎನ್​. ಸುರೇಶ್​, ದೇವಿ ಶ್ರೀನಿವಾಸ್​, ಲಕ್ಷಿ$್ಮ ಜಯರಾಮ್​, ಲೀಲಾ ರಾಜಪ್ಪ, ಶಿವಕುಮಾರ್​, ಶಿವರಾಮಕೃಷ್ಣ, ಸಹಾಯಕ ಕಾರ್ಯದರ್ಶಿ ಸೀತಾರಾಮಚಂದ್ರ, ಕಾರ್ಯದರ್ಶಿ ಮಾನಂದಿ ಸುರೇಶ ಮತ್ತಿತರರು ಇದ್ದರು.