ಜಿಲ್ಲೆ

ಅಧ್ಯಕ್ಷರಾಗಿ ಚಂದ್ರೇಗೌಡ ಅವಿರೋಧ ಆಯ್ಕೆ

ಪ್ರಸಿನ್ ಕೆ.ಆರ್

ಹನಗೋಡು: ಹೋಬಳಿಯ ಕಡೆಮನುಗನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಚಂದ್ರೇಗೌಡ ಅವಿರೋಧ ಆಯ್ಕೆಯಾದರು.

ಹಿಂದಿನ ಅಧ್ಯಕ್ಷೆ ಗೌರಮ್ಮ ಗವಿಮಾಧು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಗ್ರಾ.ಪಂ.ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ದ್ರೇಗೌಡ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಿಇಒ ಮಹದೇವ್ ಅವಿರೋಧ ಆಯ್ಕೆ ಗೋಷಿಸಿದರು.

ಉಪಾಧ್ಯಕ್ಷೆ ಗೀತಾ, ಸಹ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪಿಡಿಒ ಷಡಕ್ಷರಿ ಹಾಗೂ 10 ಜನ ಸದಸ್ಯರು ಇದ್ದರು. 3 ಸದಸ್ಯರು ಗೈರಾಗಿದ್ದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.