ಉಡುಪಿ: ಬಾಹ್ಯಾಕಾಶದಲ್ಲಿ ವಿಭಿನ್ನವಾದ ಸಾಧನೆಗೈದ ದೇಶದ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ರಾರಾಜಿಸಿದ ಚಂದ್ರಯಾನ-3 ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಪಾದಸ್ಪರ್ಶಿಸಿದ ಹೆಗ್ಗಳಿಕೆಗೆ ಪಾತ್ರರಾದ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಶುಭಹಾರೈಸಿ ಭೂಮಂಡಲದಿಂದ ಚಂದ್ರನೊಂದಿಗಿನ ಗಗನ ನೌಕೆಯೊಂದಿಗಿನ ದೃಶ್ಯವನ್ನು ಸಾರುವ 'ಕಂಗ್ರಾಜ್ಯುಲೇಶನ್ ಇಸ್ರೋ' 5 ಅಡಿ ಎತ್ತರ ಮತ್ತು 7.5 ಅಡಿ ಅಗಲಗಳುಳ್ಳ ಮರಳು ಕಲಾಕೃತಿಯನ್ನು 'ಸ್ಯಾಂಡ್ ಥೀಂ'ನಿಂದ ಮಲ್ಪೆ ಕಡಲ ತೀರದಲ್ಲಿ ರಚಿಸಲಾಯಿತು. ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಪಾಲ್ಗೊಂಡಿದ್ದರು.