ಜಿಲ್ಲೆ

ಚಂದ್ರಯಾನ ಯಶಸ್ವಿಗೆ ಹರ್ಷ : ಚಂದ್ರ ಶಿಕಾರಿ ವಿಶ್ವಗುರು ಆಗುವತ್ತ ಭಾರತದ ವಿಜ್ಞಾನಿಗಳ ದೃಢ ಹೆಜ್ಜೆ ; ಶಿವಕಾಂತ ಮಹಾಜನ ಬಣ್ಣನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಚಂದ್ರಯಾನ 3" ಯಶಸ್ಸು ಭಾರತೀಯ ಅಂತರಿಕ್ಷ ಅನ್ವೇಷಣೆಗೆ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಇದು ದೇಶದ ವಿಜ್ಞಾನಿಗಳ ದೃಢ ನಂಬಿಕೆಯ ಮತ್ತು ಇಸ್ರೋದ ವಿಜ್ಞಾನಿಗಳು ಹಾಗೂ ಇಡಿ ತಂಡದವರ ನಿರಂತರ ಪರಿಶ್ರಮದ ಫಲಿತಾಂಶವಾಗಿದೆ ಎಂದು ಮಹಾಜನ್ ಪೌಂಡೇಷನ್ ಅದ್ಯಕ್ಷರು ಆಗಿರುವ ಸಮಾಜ ಸೇವಕ ಶಿವಕಾಂತ ಮಹಾಜನ ತಿಳಿಸಿದ್ದಾರೆ.

ಚಂದ್ರನ ದಕ್ಷಿಣ ಪಥದ ಮೇಲೆ ವಿಕ್ರಮ್‌ ಲೋವರ ಲ್ಯಾಂಡರ್ ಸುರಕ್ಷಿತ ಮತ್ತು ಮೃದು ಲ್ಯಾಂಡಿಂಗ್ ಮಾಡುವ ಮೂಲಕ ಹೊಸ ಮೈಲುಗಲ್ಲು ಭಾರತ ನಿರ್ಮಿಸಿದೆ. ಇದು ಭಾರತದ ವಿಜ್ಞಾನಿಗಳ ಶ್ರೇಷ್ಠತೆ ಸಂಶೋಧನಾ ಪಾರಮ್ಯವನ್ನು ಇಡಿ ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ವಿಜ್ಞಾನಿಗಳ, ಅನ್ವೇಷಕರ ಮತ್ತು ಅಭಿಯಾನದ ಸಮಗ್ರ ಪ್ರೇರಣೆಯ ಒಂದು ಅದ್ವಿತೀಯ ಶಕ್ತಿ ಸೂಚಿಸುತ್ತದೆ.ಎಂದು ಮಹಾಜನ್ ತಿಳಿಸಿದ್ದಾರೆ.

ಈ ಚಂದ್ರಯಾನ ಯಶಸ್ಸಿನಿಂದ ಮುಂದಿನ ದಿನಗಳಲ್ಲಿ ಭಾರತೀಯರು ಅನ್ವೇಷಣಾ ಕ್ಷೇತ್ರದಲ್ಲಿ ಹೆಚ್ಚು ಮುನ್ನಡೆಯನ್ನು ಕಾಣಬಹುದು ಎಂಬುದರ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾರತ ವಿಶ್ವ ಗುರು ಆಗುವ ಕನಸನ್ನು ಇಸ್ರೋ ವಿಜ್ಞಾನಿಗಳ ತಂಡ ಮಾಡಿದೆ ಎಂದು ಶಿವಕಾಂತ ಮಹಾಜನ್ ಬಣ್ಣಿಸಿದ್ದಾರೆ.

ನ ಈ ಅದ್ಭುತ ಯಶಸ್ಸಿಗಾಗಿ ದೇಶದ ISRO ಸಂಸ್ಥೆಯ ವಿಜ್ಞಾನಿಗಳನ್ನು, ಅನ್ವೇಷಕರನ್ನು ಮತ್ತು ಅಭಿಯಾನದ ಸಮಗ್ರ ತಂಡದವರಿಗೆ ಅಭಿನಂದಿಸುವೆ. ಅವರ.ಸಾಮರ್ಥ್ಯ, ಉತ್ಸಾಹ ಮತ್ತು ದಕ್ಷತೆಯ ಸಹಾಯದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ