ಜಿಲ್ಲೆ

ಚಂದ್ರಯಾನ ಯಶಸ್ಸಿಗೆ ಪ್ರಾರ್ಥನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಚಂದ್ರಯಾನ ಯಶಸ್ಸಿಗೆ ಪ್ರಾರ್ಥಿಸಿ ಹಿಂದು ಜಾಗರಣ ವೇದಿಕೆ ವತಿಯಿಂದ ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಮಡಿಕೇರಿ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಘಟನೆ ಕಾರ್ಯಕರ್ತರು ಚಂದ್ರಯಾನ-೩ ರ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲೆಂದು ಪ್ರಾರ್ಥಿಸಿದರು. ಮಾದಾಪುರ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸದ ಕಾರ್ಯಕರ್ತರು ಇಸ್ರೋ ಚಂದ್ರಯಾನ -೩ರ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸಂಘಟನೆಯ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.