ಜಿಲ್ಲೆ

ಚಂದ್ರಶೇಖರ ಸ್ವಾಮೀಜಿ ಪುಣ್ಯಾರಾಧನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನಾಗಶೆಟ್ಟಿಕೊಪ್ಪ ಶ್ರೀ ಶ್ಯಾಂಡಿಲ್ಯಾಶ್ರಮದ ಸದ್ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ 16ನೇ ಪುಣ್ಯಾರಾಧನೆ ಡಿ. 22ರಿಂದ ಮೂರು ದಿನಗಳವರೆಗೆ ಏರ್ಪಡಿಸಲಾಗಿದೆ.

ಡಿ. 22ರಂದು ಸಂಜೆ 6ಕ್ಕೆ ಭಕ್ತಿಸುಧೆ& ಸತ್ಸಂಗ ನಡೆಯಲಿದ್ದು, ಮಾತೋಶ್ರೀ ತೇಜೋಮಯಿ, ನೆಲಮಂಗಲದ ಮಾತೋಶ್ರೀ ಉಮಾಭಾರತಿ ಪಾಲ್ಗೊಳ್ಳುವರು.

ಡಿ. 23ರಂದು ಬೆಳಗ್ಗೆ 7ಕ್ಕೆ ಸದ್ಗುರು ಶಿಲಾಮೂತಿರ್ಗಳಿಗೆ ರುದ್ರಾಭಿಷೇಕ, ಸಂಜೆ 4ಕ್ಕೆ ಹುಬ್ಬಳ್ಳಿ ಧಾರವಾಡ ಗೀತಾ ಪರಿವಾರದವರಿಂದ ಸಂರ್ಪೂಣ ಭಗವದ್ಗೀತಾ ಪಾರಾಯಣ ನಡೆಯಲಿದೆ. ಚಿನ್ಮಯ ಮಿಶನ್ನ ಶ್ರೀ ಕೃತಾತ್ಮಾನಂದ ಸ್ವಾಮೀಜಿ ಉಪನ್ಯಾಸ ನೀಡುವರು.

ಡಿ. 24ರಂದು ಬೆಳಗ್ಗೆ 10ಕ್ಕೆ ಮಂದಾರ ಚಿತಳೆ ಅವರಿಂದ ಸಂಗೀತ ಕಾರ್ಯಕ್ರಮ. 11ಕ್ಕೆ ಪ್ರವಚನ, ಸಭಾ ಕಾರ್ಯಕ್ರಮಗಳು ನಡೆಯಲಿವೆ.
ಇಂಚಲ ಸಾಧು ಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ. ಶ್ರೀ ಶಿವಾನಂದಭಾರತಿ ಸ್ವಾಮೀಜಿ, ಸಾನ್ನಿಧ್ಯ ವಹಿಸುವರು. ಸದ್ಗುರು ಶ್ರೀ ಸಂಗಮೇಶ್ವರ ಶರಣರು, ಶ್ರೀ ರಾಮಾನಂದ ಭಾರತಿ ಸ್ವಾಮೀಜಿ, ಇತರರು ಪಾಲ್ಗೊಳ್ಳುವರು.

ಸದ್ಧರ್ಮ ಜ್ಞಾನ ಪ್ರಸಾರಕ ಮಂಡಳಿ ಹಾಗೂ ಶ್ರೀ ಶ್ಯಾಂಡಿಲ್ಯಾಶ್ರಮ ನ್ಯಾಸ ಮಂಡಳಿ, ಬಗಳಾಂಬಾ ಮಹಿಳಾ ಮಂಡಳಿ, ಭಕ್ತರು ಸೇರಿ ಪುಣ್ಯಾರಾಧನೆ ಆಚರಿಸುತ್ತಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.