ಜಿಲ್ಲೆ

ಡಯಟ್ ಪ್ರಾಂಶುಪಾಲರಿಗೆ ಬೀಳ್ಕೊಡುಗೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಜುಲೈ ಅಂತ್ಯಕ್ಕೆ ನಿವೃತ್ತರಾದ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)

ಪ್ರಾಂಶುಪಾಲ ಎಂ. ಚಂದ್ರಕಾAತ್ ಅವರಿಗೆ ಡಯಟ್ ಸಂಸ್ಥೆಯ ವತಿಯಿಂದ ಈಚೆಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಡಯಟ್ ಸಂಸ್ಥೆಯ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿ.ಎನ್. ಪುಷ್ಪಾ, ಗೀತಾ, ಎನ್.ವಿ. ಸ್ವಾಮಿ, ವಿ. ವಿಜಯ್, ಕೆ.ಎಸ್. ನಳಿನಾಕ್ಷಿ, ಪಿ.ಪಿ. ಗಾಯತ್ರಿ, ಎಂ.ಲತಾ ಮಾತನಾಡಿದರು.

ಸೋಮವಾರಪೇಟೆ ಬಿಇಓ ಎಸ್. ಭಾಗ್ಯಮ್ಮ, ಸುಳ್ಯ ಬಿಇಓ ಎಂ.ಕೃಷ್ಣಪ್ಪ, ಹುಣಸೂರು ಬಿಇಓ ಎಸ್.ಪಿ.ಮಹಾದೇವ, ನಿವೃತ್ತ ಬಿಇಓ ಶಿವಣ್ಣ, ಆಲೂರು ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಸಿದ್ದೇಶ್ ಕುಮಾರ್, ಸಂಸ್ಥೆಯ ಅಧೀಕ್ಷಕಿ ಭವಿ ಪೊನ್ನಪ್ಪ, ಜಿ.ಟಿ. ಜಯಂತಿ, ಸಿಬ್ಬಂದಿ ಹಾಗೂ

ಪ್ರಶಿಕ್ಷಣಾರ್ಥಿಗಳು ಇದ್ದರು.