ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಪಂ ಉಪಾಧ್ಯಕ್ಷೆಯಾಗಿ ಚಂದ್ರಕಲಾ ಶಿವಣ್ಣ ಅವಿರೋಧ ಆಯ್ಕೆಯಾದರು. ಮಮತಾ, ಪುಷ್ಪಲತಾ, ಅನಿತಾ, ಮಂಜುಳಾ, ಶ್ವೇತಾ ಇದ್ದರು.  
ಜಿಲ್ಲೆ

ಚಂದ್ರಕಲಾ ಶಿವಣ್ಣ ಲಕ್ಷ್ಮೀಪುರ ಗ್ರಾಪಂ ಉಪಾಧ್ಯಕ್ಷೆ

ಕಿಕ್ಕೇರಿ; ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಚಂದ್ರಕಲಾ ಶಿವಣ್ಣ ಅವಿರೋಧವಾಗಿ ಆಯ್ಕೆಯಾದರು.

ತೆರವಾಗಿದ್ದ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚಂದ್ರಕಲಾ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅರುಣಕುಮಾರ್ ಅವಿರೋಧ ಆಯ್ಕೆ ಘೊಷಿಸಿದರು.

ಪಿಡಿಒ ಸುರೇಂದ್ರಬಾಬು, ಗ್ರಾಪಂ. ಅಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಶ್ರೀಧರ್, ರಾಜಶೇಖರ್, ಬಸವರಾಜು, ಉಮೇಶ್, ಸ್ವಾಮಿ, ಮಮತಾ, ಪುಷ್ಪಲತಾ, ಅನಿತಾ, ಮಂಜುಳಾ, ಶ್ವೇತಾ, ಮುಖಂಡರಾದ ತುಳಸಿ ರಮೇಶ್, ರಘು, ಕನಕ, ಅಶೋಕ್, ಕಾರ್ಯದರ್ಶಿ ಯೋಗೇಶ್, ಶ್ರೀಧರ್ ಇದ್ದರು.