ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಾಲಯದ ಅಮ್ಮನ ಕೆರೆ ಕೋಡಿ ಬಿದ್ದು ಜಲಪಾತದಂತೆ ಧುಮ್ಮಿಕ್ಕುತ್ತಿರುವುದು. 
ಜಿಲ್ಲೆ

ಕೋಡಿ ಬಿದ್ದ ಚಂದ್ರಗುತ್ತಿ ಅಮ್ಮನಕೆರೆ

Shivamogga - Desk - Praveena Kumar S

ಸೊರಬ: ಮಳೆಗೆ ಹಳ್ಳ, ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಬಹುತೇಕ ಕೆರೆಗಳು ತುಂಬಿದ್ದು ಕೋಡಿ ಬಿದ್ದಿವೆ. ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಾಲಯದ ಹತ್ತಿರ ವಿರುವ ಅಮ್ಮನ ಕೆರೆ ಕೋಡಿ ಬಿದ್ದಿದ್ದು ಗುಡ್ಡದ ಇಳಿಜಾರಿನಲ್ಲಿ ಜಲಪಾತದಂತೆ ಧುಮ್ಮಿಕ್ಕಿ ಹರಿಯುತ್ತಿದೆ. ಶ್ರೀ ರೇಣುಕಾಂಬಾ ದೇವಿಯ ದರ್ಶನ ಪಡೆದು ಎಡಭಾಗದಲ್ಲಿ ಇಳಿದು ಬರುವಾಗ ಗುಡ್ಡದ ಮೇಲ್ಭಾಗದಲ್ಲಿ ಅಮ್ಮನ ಕೆರೆ ಇದೆ. ಕೋಡಿ ತಾತ್ಕಾಲಿಕವಾದರೂ ಜಲಪಾತದಂತೆ ಬೀಳುವ ನೀರು ನೋಡುಗರ ಕಣ್ಮನ ಸೆಳೆಯುತ್ತಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಈ ಜಲಪಾತ ಮತ್ತಷ್ಟು ಆಕರ್ಷಿಸುತ್ತಿದೆ. ಗಿಡಗಂಟಿಗಳಿಂದ ಮುಚಿಕೊಂಡಿದ್ದ ಕೆರೆ ಮತ್ತು ಇಳಿಜಾರು ಪ್ರದೇಶವನ್ನು ದೇಗುಲ ಸಮಿತಿ, ಅರ್ಚಕ ಸಿಬ್ಬಂದಿ ಕಡಿದು ಜಲಪಾತ ಕಾಣುವಂತೆ ಮಾಡಿದ್ದಾರೆ