Chandika Yaga nelamangala 
ಜಿಲ್ಲೆ

ಲೋಕಕಲ್ಯಾಣಕ್ಕಾಗಿ ಚಂಡಿಕಾಯಾಗ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಚನ್ನಪ್ಪ ಬಡಾವಣೆಯಲ್ಲಿನ ಆಚಾರ್ಯ ಕುಟೀರದಲ್ಲಿ ನವರಾತ್ರಿ ಹಾಗೂ ಲೋಕಕಲ್ಯಾಣಕ್ಕಾಗಿ ಚಂಡಿಕಾ ಯಾಗ ನೆರವೇರಿಸಲಾಯಿತು.
ವಿಜಯಕುಮಾರ ಗುರೂಜಿ ನೇತೃತ್ವದಲ್ಲಿ ದುರ್ಗಾದೇವಿಗೆ ಪಂಚಾಮೃತಾಭಿಷೇಕ, ಅರಿಶಿಣ, ಕುಂಕುಮ ಗಂಧಾಭಿಷೇಕ ಹಾಗೂ ನವರಾತ್ರಿ ಪಯುಕ್ತ ಪ್ರತಿಷ್ಠಾಪಿಸಿರುವ ಗೌರಿ, ಲಕ್ಷ್ಮೀ, ಸರಸ್ವತಿ, ಪರಿವಾರ ದೇವತೆಗಳಾದ ಶ್ರೀದೇವಿ ಭೂದೇವಿ, ವೆಂಕಟೇಶ್ವರ, ಕಾಲಬೈರವೇಶ್ವರ, ಪಾರ್ವತಿಪರಮೇಶ್ವರ, ಭದ್ರಕಾಳಿ, ಆಂಜನೇಯ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಬರಗಾಲ ದೂರ ಮಾಡಿ ಆರೋಗ್ಯ ಕರುಣಿಸಿ, ಸಕಾಲಕ್ಕೆ ಮಳೆ, ಸಮೃದ್ಧ ಬೆಳೆ ಬೆಳೆದು ರೈತರು ಹಾಗೂ ರಾಜ್ಯದ ಸಮಸ್ತ ಪ್ರಜೆಗಳು ಆರೋಗ್ಯದಿಂದ ಇರಲೆಂದು ದುರ್ಗಾದೇವಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಚಂಡಿಕಾ ಯಾಗವನ್ನು 7 ಅಧ್ಯಾಯಗಳ ದುರ್ಗಾಸಪ್ತಶತಿ ಪಾರಾಯಣದಿಂದ ಶ್ರೀ ಸತ್ಯಪ್ರಮೋದಾಚಾರ್ಯ ಅವರು ನೆರವೇರಿಸಿದರು. ಒಂಭತ್ತು ದಿನವೂ ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ಹೋಮ ಹವನಾದಿಗಳನ್ನು ಮಾಡಲಾಗುತ್ತಿದೆ. ಸೋಮವಾರ ಸಿದ್ಧಿದಾತ್ರಿ ಪೂಜೆ, ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ವಿಸರ್ಜನೆ ನಂತರ ನವರಾತ್ರಿ ಆಚರಣೆ ಅಂತ್ಯಗೊಳಿಸಲಾಗುವುದು ಎಂದು ವಿಜಯಕುಮಾರ್ ಗುರೂಜಿ ತಿಳಿಸಿದರು.
ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್‌ಪಿ ಹೇಮಂತಕುಮಾರ್, ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರದೀಪ್‌ಕುಮಾರ್, ಸದಸ್ಯ ಎನ್.ಗಣೇಶ್, ಎನ್.ಎಸ್.ಪೂರ್ಣಿಮಾ, ಮುಖಂಡ ಲೋಕೇಶ್, ಸೇವಾಕರ್ತರಾದ ಎನ್.ಎಂ.ಹರೀಶ್‌ಕುಮಾರ್, ಗೋವೇನಹಳ್ಳಿ ಮಂಜುನಾಥ್, ನವರಾತ್ರಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೊಂಡೆಕೊಪ್ಪ ರಮೇಶ್, ಸದಸ್ಯರಾದ ವೃಕ್ಷಮಹೇಶ್, ರವಿಕುಮಾರ್, ಕೆ.ಸಿ.ಕುಮಾರ್, ಎಸ್‌ವಿಟಿ ಚಂದ್ರಕುಮಾರ್, ರಾಜಣ್ಣ, ಸುಭಾಷ್, ನವೀನ್, ಮಂಜುಳಾ ಗಣೇಶ್, ಪ್ರೇಮಾ ರವಿಕುಮಾರ್, ಪ್ರೇಮಾ ಹರೀಶ್, ಮಂಜುಳಾ ಮಹೇಶ್, ಆಚಾರ್ಯ ಸುದರ್ಶನ್, ಶ್ರೀಧರ್, ಶ್ರೀನಿವಾಸ್, ಶ್ರೀನಾಋಥ್ ಇದ್ದರು.