ಜಿಲ್ಲೆ

ಬೈಲೂರು ಮಹಿಷಮರ್ದಿನಿ ದೇಗುಲದಲ್ಲಿ ಚಂಡಿಕಾ ಯಾಗ

ವೀಣಾಪಾಣಿಯಾದ ಮಹಿಷಮರ್ದಿನಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಗ್ರಾಮದ ವತಿಯಿಂದ ಶುಕ್ರವಾರ (ಸೆ.26) ಶ್ರೀದೇವಿಯ ಸನ್ನಿಧಿಯಲ್ಲಿ ಚಂಡಿಕಾ ಯಾಗ ಸೇವೆ ನಡೆಯಿತು. ನವರಾತ್ರಿಯ ಲಲಿತಾ ಪಂಚಮಿಯ ನಿಮಿತ್ತ ವೀಣಾಪಾಣಿಯಾಗಿ ದೇವಿಯನ್ನು ಅಲಂಕಾರಗೊಳಿಸಲಾಗಿತ್ತು.

ದೇವಳದ ತಂತ್ರಿಗಳಾದ ಕೆ.ಎ. ರಮಣ ತಂತ್ರಿ ಅವರ ನೇತೃತ್ವದಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ, ಸಂಕಲ್ಪ ಪೂಜೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪಂಚಾಮೃತ ಅಭಿಷೇಕ, ಸುಹಾಸಿನಿ ಪೂಜೆ, ಪಲ್ಲ ಪೂಜೆ, ಮಹಾಪೂಜೆ ನೆರವೇರಿತು. ಚಂಡಿಕಾ ಯಾಗದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ದೇವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ, ಕಾರ್ಯದರ್ಶಿ ನಾರಾಯಣ ದಾಸ್​ ಉಡುಪ, ಕೋಶಾಧಿಕಾರಿ ಮೋಹನ್​ ಕೃಷ್ಣ, ಅರ್ಚಕ ವಾಸುದೇವ ಭಟ್​, ಶ್ರೀನಿವಾಸ ಭಟ್​, ಪವಿತ್ರಪಾಣಿ ಶ್ರೀನಿವಾಸ ಆಚಾರ್ಯ, ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಹ್ಮಣ್ಯ ತಂತ್ರಿ, ರಮೇಶ ಶೆಟ್ಟಿ ಕಳತ್ತೂರು, ರತ್ನಾಕರ ಶೆಟ್ಟಿ, ಮೋಹನ ಆಚಾರ್ಯ, ದುರ್ಗಾಪ್ರಸಾದ, ಸುರೇಶ ಶೆಟ್ಟಿ, ಅರುಣ ಶೆಟ್ಟಿಗಾರ್​, ಸುರೇಶ ಶೆಟ್ಟಿ, ಸುಭಾಸ ಭಂಡಾರಿ, ಅರುಣ ಶೆಟ್ಟಿಗಾರ್​, ರೂಪಶ್ರೀ ರಾವ್​ ಹಾಗೂ ವಿವಿಧ ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು.