ಲೋಕ ಕಲ್ಯಾಣಾರ್ಥ ನೀರಮಾನ್ವಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಶುಕ್ರವಾರ ನವ ಚಂಡಿಕಾ ಹೋಮ ನೆರವೇರಿಸಲಾಯಿತು. ಪಂ. ವಾಜೇಶ ಭಟ್ಟರು, ಜಿಪಂ ಮಾಜಿ ಸದಸ್ಯ ಗಂಗಣ್ಣ ನಾಯಕ ಇದ್ದರು. 
ಜಿಲ್ಲೆ

ಮಳೆ, ಬೆಳೆಗಾಗಿ ಚಂಡಿಕಾ ಹೋಮ

ನರೇಶ್ ಕುಮಾರ್

ಮಾನ್ವಿ: ಸಮೃದ್ಧ ಮಳೆ, ಬೆಳೆ, ಲೋಕಕಲ್ಯಾಣಾರ್ಥ ತಾಲೂಕಿನ ನೀರಮಾನ್ವಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಶುಕ್ರವಾರ ಶಾಸಕ ಹಂಪಯ್ಯನಾಯಕ ಅಭಿಮಾನಿ ಬಳಗದಿಂದ ನವ ಚಂಡಿಕಾ ಹೋಮ ಮಾಡಲಾಯಿತು.

ಉಡುಪಿಯ ಆಗಮ ಪಂ.ವಾಜೇಶ ಭಟ್ಟರು ಹೋಮ ನೆರವೇರಿಸಿ ಮಾತನಾಡಿ, ಮಾನ್ವಿ ಕ್ಷೇತ್ರ ದಾನ ಮತ್ತು ಧರ್ಮಕ್ಕೆ ಹೆಸರಾಗಿದ್ದು, ಪ್ರಸ್ತುತ ಹೋಮದಿಂದ ನಾಡಿನಲ್ಲಿ ಮಳೆ, ಬೆಳೆ ಸಮೃದ್ಧಿ, ಲೋಕ ಕಲ್ಯಾಣ, ಜನತೆಗೆ ಆರೋಗ್ಯ ಮತ್ತು ಸುಭಿಕ್ಷೆ ನೆಲೆಸುವಂತೆ ಪ್ರಾರ್ಥಿಸಿ ಹೋಮ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಹಂಪಯ್ಯನಾಯಕ, ಜಿಪಂ ಮಾಜಿ ಸದಸ್ಯ ಗಂಗಣ್ಣ ನಾಯಕ, ಶಿವರಾಜ ವಕೀಲರು, ಗೋಪಾಲ ನಾಯಕ, ಪಂಪಾಪತಿ ಪೂಜಾರಿ, ನಾಗನಗೌಡ, ಮಲ್ಲಿಕಾರ್ಜುನ ಪೂಜಾರಿ, ಶ್ರೀರಾಮುಲು, ಬುಡ್ಡುಸಾಬ್, ರಾಘವೇಂದ್ರ ಶೆಟ್ಟಿ, ರವಿಕುಮಾರ, ಪ್ರವೀಣ, ಚನ್ನಬಸವ ಬೆಟ್ಟದೂರು, ಕರಿಬಸಪ್ಪ, ಪಂಪಣ್ಣ ಕುಂಬಾರ, ಹನುಮೇಶ ಇತರರಿದ್ದರು.