ಜಿಲ್ಲೆ

ಬಿಣಗಾ ಆರ್ಯ ದುರ್ಗಾ ದೇವಸ್ಥಾನದಲ್ಲಿ ಚಂಡಿ ಹವನ ಸಂಪನ್ನ

Uttara Kannada - Subash Hegde

ಕಾರವಾರ: 

ಬಿಣಗಾ ಗ್ರಾಸಿಂ ಇಂಡಸ್ಟ್ರೀಸ್‌ ಆವಾರದ ಒಳಗಿರುವ ಆರ್ಯದುರ್ಗಾ ದೇವಸ್ಥಾನದಲ್ಲಿ ಶತ ಚಂಡಿ ಹವನ ಸಂಪನ್ನಗೊಂಡಿತು. ಮಂಗಳವಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಅಂದು ಸಪ್ತಶತಿ ಪಾರಾಯಣ ನಡೆಯಲಿದೆ. ಬುಧವಾರ ಕಲಶ ಸ್ಥಾಪನೆ, ಗೃಹ ಶಾಂತಿ, ಮೃತ್ಯುಂಜಯ ಶಾಂತಿ, ಪ್ರಾಯಶ್ವಿತ್ತ, ಶಕ್ತಿ ತತ್ವ, ಕಲಾ ಹೋಮಗಳು ನಡೆದವು. ಗುರುವಾರ ಚಂಡಿ ಪ್ರಧಾನ ಹವನ, ಯೋಗಿನಿ ಹವನ, ದಿಕ್ಪಾಲ ಬಲಿ, ಮಹಾ ಪೂರ್ಣಾಹುತಿ, ದೇವಿಗೆ ಪ್ರಾರ್ಥನೆ ಪ್ರಸಾದ ವಿತರಣೆಯ ನಂತರ ಅನ್ನ ಸಂತರ್ಪಣೆ ನಡೆಯಿತು.