ಕಾನಹೊಸಹಳ್ಳಿಯಲ್ಲಿ ಕುಳುವ ಸಮುದಾಯದಿಂದ ಕಾಯಕಯೋಗಿ ನುಲಿಯ ಚಂದಯ್ಯ ಭಾವಚಿತ್ರದ ಮೆರವಣಿಗೆ ನಡೆಯಿತು. 
ಜಿಲ್ಲೆ

ಸಮಾಜದ ಒಳಿತಿಗಾಗಿ ಶ್ರಮಿಸಿದ್ದ ಚಂದಯ್ಯ

ಕಾನಹೊಸಹಳ್ಳಿ: ನುಲಿಯ ಚಂದಯ್ಯ ಕಾಯಕ ಮತ್ತು ದಾಸೋಹ ತತ್ವದಿಂದ ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ. ಎಲ್ಲರೂ ಅವರ ವಚನಗಳ ಆಶಯ ಅರಿಯಬೇಕು ಎಂದು ಕುಳುವ (ಕೊರಮ) ಸಮುದಾಯದ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ಶ್ರೀಧರ ಹೇಳಿದರು.

ಜಿನ್ನದಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ಕಾಯಕಯೋಗಿ ನುಲಿಯ ಚಂದಯ್ಯ ಅವರ 918ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಹಗ್ಗ ನೂಲುವ ಕಾಯಕ ಮಾಡುತ್ತಿದ್ದ ನುಲಿಯ ಚಂದಯ್ಯ ಮೇಲು, ಕೀಳೆಂಬ ತಾರತಮ್ಯ ಹೋಗಲಾಡಿಸಲು ವಚನಗಳನ್ನು ರಚಿಸಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಸಂಘಟನೆ ಕಾರ್ಯದರ್ಶಿ ಮಾರುತಿ ಕೆ.ದೊಡ್ಮನೆ ಮಾತನಾಡಿ, ಕುಳುವ ಸಮುದಾಯ ಸಂಘಟನೆ ಜತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕಿದೆ ಎಂದರು. ಜನಪದ ವಾದ್ಯಮೇಳದೊಂದಗೆ ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಕುಳುವ ಸಮುದಾಯ ಸಂಘಟನೆ ಗೌರವಾಧ್ಯಕ್ಷ ಕೆ.ತಿಪ್ಪೇಶ್ ದೊಡ್ಮನೆ, ಅಧ್ಯಕ್ಷ ಕೆ.ಟಿ.ನಾಗರಾಜ, ಉಪಾಧ್ಯಕ್ಷ ವೆಂಕಟೇಶ್ ದೊಡ್ಮನೆ, ಖಜಾಂಚಿ ಕೆ.ಚಂದ್ರಪ್ಪ, ಸಂಚಾಲಕರಾದ ತಿಪ್ಪೇಸ್ವಾಮಿ, ಹನುಮಂತಪ್ಪ, ನಿರ್ದೇಶಕ ಕೆ.ಹೇಮಣ್ಣ, ಸಹ ನಿರ್ದೇಶಕರಾದ ಕೆ.ಬಿ.ವೆಂಕಟೇಶ್, ಮಹಾಂತೇಶ್, ಕೆ.ಎನ್.ಶಶಿಕುಮಾರ್, ಹುಲುಗೇಶ್, ಸಂಘಟನಾ ಕಾರ್ಯದರ್ಶಿಗಳಾದ ಜೆ.ನಾಗರಾಜ, ಕೆ.ಟಿ.ರವಿಚಂದ್ರ, ಗಾದ್ರಿಲಿಂಗಪ್ಪ, ಪ್ರಮುಖರಾದ ಶರಣಮ್ಮ, ರಂಗಮ್ಮ, ಕರಿಬಸಮ್ಮ, ಯಲ್ಲಮ್ಮ, ಶಶಿರೇಖಾ, ಶೋಭಾ, ನಾಗಮ್ಮ ಇತರರಿದ್ದರು.