ಲಿಂಗಾಯತ ಸಮಾಜ ನಾಯಕರಾದ ರವೀಂದ್ರ ಶಾಬಾದಿ ಅವರ ಮಾತೋಶ್ರೀ ಇನ್ನಿಲ್ಲ
ಕಲಬುರಗಿ: ಇಲ್ಲಿನ ಸಿದ್ದೇಶ್ವರ ನಗರದ ಹಾಗೂ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದ ಹಿರಿಯರಾದ ಚಂದ್ರಮ್ಮ ಭೋಗಲಿಂಗಪ್ಪ ಶಾಬಾದಿ( 93) ಭಾನುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಲಿಂಗಾಯತ ಮಹಾಸಭಾದ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ ಸೇರಿ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಾರ್ಚ 24 ಸೋಮವಾರ ಮಧ್ಯಾಹ್ನ 3 ಕ್ಕೆ ಸ್ವಗ್ರಾಮ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.