ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಚ್.ಎಸ್.ಬಸವರಾಜು ಅವರನ್ನು ನಾಗವಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಎಚ್.ಎಸ್.ಬಸವರಾಜು ಮಾತನಾಡಿ, ಈ ಭಾಗದಲ್ಲಿ ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ವಿದ್ಯಾರ್ಥಿನಿಯರ ವಸತಿ ನಿಲಯ ಸ್ಥಾಪನೆ ಒಕ್ಕೂಟ ಚಿಂತನೆ ಮಾಡಿದೆ. ಏನಾದರೂ ಹಾಲು ಉತ್ಪಾದಕರ ಮಕ್ಕಳು ಮೈಸೂರಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಪಿಜಿಯಲ್ಲಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಒಕ್ಕೂಟದ ಸೌಲಭ್ಯ ಕೊಡಿಸಿಕೊಡಲಾಗುವುದು. ಒಕ್ಕೂಟದ ವತಿಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಹಾಲು ಉತ್ಪಾದಕರಿಗೆ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಾಗವಳ್ಳಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿಜಯೇಂದ್ರ, ಗ್ರಾ.ಪಂ.ಸದಸ್ಯರಾದ ಗೋವಿಂದರಾಜ್, ಮೂರ್ತಿ, ಮುಖಂಡ ಬಸವನಪುರ ರಾಜಶೇಖರ್, ದಡದಹಳ್ಳಿ ಶಂಕರ್, ಹೆಬ್ಬಸೂರು ಶಕ್ತಿ ಕೇಂದ್ರದ ನಾಗಸುಂದ್ರ, ನಂಜುAಡಸ್ವಾಮಿ, ಮಹದೇವಪ್ರಸಾದ್, ನಾಗೇಶ್, ನಾಗಯ್ಯ, ಚಂದಕವಾಡಿ ರವಿ, ಕೋಡಿಮೋಳೆ ಮಹೇಶ್, ಬಂಗಾರು, ಅರಳೀಪುರ ಮಹದೇವಸ್ವಾಮಿ, ಶಿವಕುಮಾರ್, ನಾಗವಳ್ಳಿ ಶಕ್ತಿ ಕೇಂದ್ರದ ನಾಗಮಲ್ಲೇಶ್, ಪುಟ್ಟಸ್ವಾಮಿ, ಪುಟ್ಟಣ್ಣ, ಮಹೇಶ್, ಅಯ್ಯನಪುರ ಶ್ರೀಕಾಂತ್, ದೊಡ್ಡಮೋಳೆ ಮಂಜ ಇತರರು ಹಾಜರಿದ್ದರು.