ಕೋಟ: ಸ್ಥಳೀಯ ಪ್ರತಿಷ್ಠಿತ ಕೋಟದ ವಿವೇಕ ವಿದ್ಯಾಸಂಸ್ಥೆಗಳ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚೇಂಪಿ ರಮಾನಂದ ಭಟ್ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಸದಾರಮ ಹೇರ್ಳೆ ಹಾಗೂ ನಾಗೇಶ ಶ್ಯಾನುಭಾಗ್, ಕಾರ್ಯದರ್ಶಿಯಾಗಿ ಸುಧಾಕರ, ಜತೆ ಕಾರ್ಯದರ್ಶಿಗಳಾಗಿ ಸಂಜೀವ ಜಿ. ಹಾಗೂ ಚಂದ್ರಶೇಖರ ಮೆಂಡನ್, ಖಜಾಂಚಿಯಾಗಿ ಪ್ರಕಾಶ ಹೇರ್ಳೆ ಆಯ್ಕೆಯಾದರು.