ಗದಗ ಉತ್ಸವ ಕುರಿತು ಚಂದ್ರು ಬಾಳಿಹಳ್ಳಿಮಠ ಸುದ್ದಿಗೋಷ್ಠಿ ನಡೆಸಿದರು. ಈಶಣ್ಣ ಮುನ್ನವಳ್ಳಿ, ವಿಜಯಕುಮಾರ ಹಿರೇಮಠ, ತಾತನಗೌಡ ಪಾಟೀಲ ಹಲವರು ಇದ್ದರು. 
ಜಿಲ್ಲೆ

ವಾಣಿಜ್ಯೋದ್ಯಮ ಸಂಸ್ಥೆಯಿಂದ 5 ದಿನಗಳ ಕಾಲ ಗದಗ ಉತ್ಸವ

Gadag - Shivanand Hiremath

ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆ.30 ರಿಂದ ಸೆ.3ರ ವರೆಗೆ ಪ್ರಸಕ್ತ ಸಾಲಿನ ಕೈಗಾರಿಕಾ ವಸ್ತು ಪ್ರದರ್ಶನ, ಮಾರಾಟ ಹಾಗೂ ಗದಗ ಉತ್ಸವ ಕಾರ್ಯಕ್ರಮವು ಜರುಗಲಿದೆ ಎಂದು ಉತ್ಸವ ಸಮಿತಿಯ ಚೇರಮನ್​ ಚಂದ್ರು ಬಾಳಿಹಳ್ಳಿಮಠ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದೇ ಸೂರಿನಡಿಯಲ್ಲಿ ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಅಂತಹ ಉತ್ಪನ್ನಗಳಿಗೆ ವೇದಿಕೆ ಒದಗಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ 24 ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತ ಬಂದಿದೆ ಎಂದರು.
ಆ. 30 ರಂದು ಸಂಜೆ 4.30 ಕ್ಕೆ ಸಚಿವ ಎಚ್​.ಕೆ. ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೋಂಟದಾರ್ಯ ಸಿದ್ದರಾಮ ಶ್ರೀಗಳುಗಳು ಸಾನ್ನಿಧ್ಯ ವಹಿಸುತ್ತಾರೆ. ಆ.31 ರಂದು ಸಂಜೆ 5 ಕ್ಕೆ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹರಿಜನ್​ ಅವರು 2020-&25ರ ಕೈಗಾರಿಕಾ ನೀತಿ ಕುರಿತು ವಿಚಾರ ಸಂಕಿರಣ ನಡೆಸಿಕೊಡುವರು. ಮಹಿಳಾ ಟಕದ ವತಿಯಿಂದ ಅಡುಗೆ ಸ್ಪರ್ಧೆ, ರಕ್ತದಾನ ಶಿಬಿರ ಜರಗುತ್ತವೆ ಎಂದು ತಿಳಿಸಿದರು.
ಸೆ.2 ರಂದು ಸಂಜೆ 5 ಕ್ಕೆ ಜವಳಿ ನೀತಿಗಳ ಕುರಿತು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎಚ್​.ಜಿ. ಪಾಟೀಲ ಮತ್ತು ರ್ತು ಕುರಿತು ವಿಟಿಪಿಸಿ ಉಪನಿರ್ದೇಶಕ ಪಿ.ಎಸ್​. ಮಲ್ಲಿಕಾರ್ಜುನ ಅವರಿಂದ ವಿಚಾರಣ ಸಂಕಿರಣ ಜರಗುವುದು. ಸೆ.2 ರಂದು ಸಂಜೆ 5 ಕ್ಕೆ ಜರಗುವ ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾಲಕೆರೆ ಮುಪ್ಪಿನ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಮಲ್ಲಿಕಾರ್ಜುನ ಸುರಕೋಡ ಮತ್ತು ಶರಣಪ್ಫ ಕುರಡಗಿ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಶ್ರೇಷ್ಠ ವರ್ತಕ ಮತ್ತು ಶ್ರೇಷ್ಠ ಉದ್ಯಮಿ ಪ್ರಶ್ತಿಗಳನ್ನು ವಿತರಿಸಲಾಗುವುದು. ಸೆ. 3 ರಂದು ಸಂಜೆ 6 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ, ಜಿಪಂ ಸಿಇಒ ಭರತ್​ ಎಸ್​ ಭಾಗವಹಿಸುವರು ಎಂದು ಹೇಳಿದರು.
ಈಶಣ್ಣ ಮುನ್ನವಳ್ಳಿ, ವಿಜಯಕುಮಾರ ಹಿರೇಮಠ, ತಾತನಗೌಡ ಪಾಟೀಲ, ಹರೀಶ್​ ಕುಮಾರ್​, ಉಮೇಶ ನಾಲವಾಡ, ಇತರರು ಇದ್ದರು.

ಕೋಟ್​:
ಉತ್ಸವದಲ್ಲಿ 100 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪ್ರತಿನಿತ್ಯ ಸಂಜೆ ಸಾಂಸತಿಕ ಕಾರ್ಯಕ್ರಮ ಜರುಗುತ್ತವೆ. ವಸ್ತುಪ್ರದರ್ಶನ, ಮಾರಾಟ ಕಾರ್ಯಕ್ರಮದ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು.

ಈಶಣ್ಣ ಮುನವಳ್ಳಿ. ಅಧ್ಯಕ್ಷರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ