ಚಾಮರಾಜನಗರ: ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಹದೇವಯ್ಯ, ಉಪಾಧ್ಯಕ್ಷರಾಗಿ ಎಸ್. ಸಿದ್ದಶೆಟ್ಟಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದ ಸಿದ್ಧನಾಯಕ ಮತ್ತು ಶಿವಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಮಹದೇವಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಶೆಟ್ಟಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ತ್ಯಾಗರಾಜು ಅವರು ಅಧಿಕೃತವಾಗಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಸಂಘದ ನಿರ್ದೇಶಕರಾದ ಎಸ್. ಮಂಜುನಾಥ, ಸಿದ್ದಮಲ್ಲಪ್ಪ, ಎಲ್. ಶಿವಕುಮಾರ್, ಎಸ್. ಶಿವಕುಮಾರ್, ಎಸ್. ಸಿದ್ದೇಗೌಡ, ರಾಜಮ್ಮ, ಸಿಇಓ ಅಶೋಕ, ಗ್ರಾಮ ಪಂಚಾಯಿತಿ ಸದಸ್ಯ ಸಿ.ಮಹದೇವಪ್ಪ, ಎಸ್.ಗೀರೀಶ, ಸದಸ್ಯರಾದ ನಾಗರತ್ನಮ್ಮನಾರಾಯಣ ನಾಯಕ, ರಮ್ಯ ನಾಗರಾಜು, ಗೀತಾ ಚನ್ನಬಸಪ್ಪ, ಮುಖಂಡರಾದ ಕೊತ್ತಲವಾಡಿ ಸೋಮಲಿಂಗಪ್ಪ ಮತ್ತು ಇತರರು ಇದ್ದರು.