ಜಿಲ್ಲೆ

ನೂತನ ಎಂಪಿ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಸಂಸದರಾಗಿರುವ ಸುನೀಲ್ ಬೋಸ್ ಮೇಲೆ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ತಲಾ 4 ವಿಧಾನಸಭಾ ಕ್ಷೇತ್ರಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು ಕ್ಷೇತ್ರಗಳಲ್ಲಿ ಬೋಸ್‌ಗೆ ಉತ್ತಮ ಮತಗಳೇ ಸಿಕ್ಕಿವೆ. ಗೆದ್ದರೆ ಅಭಿವೃದ್ಧಿ ಮೂಲಕ ಕ್ಷೇತ್ರ ಚಿತ್ರಣ ಬದಲಾಯಿಸಬಹುದೆಂಬ ನಂಬಿಕೆಯಲ್ಲಿ ಮತದಾರರು ಅಧಿಕ ಅಂತರದ ಮತಗಳನ್ನೇ ಕೊಟ್ಟಿದ್ದಾರೆ. ಇವರ ನಿರೀಕ್ಷೆಗಳಿಗೆ ತಕ್ಕನಾಗಿ ನೂತನ ಎಂಪಿ ಕೆಲಸ ಮಾಡಬೇಕೆಂಬು ಅಪೇಕ್ಷೆ ಇದೆ. ಮುಖ್ಯವಾಗಿ ಮೂಲಸೌಕರ್ಯ, ರೈಲು ಯೋಜನೆ, ಕುಡಿಯುವ ನೀರಿನ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ, ಶಿಕ್ಷಣಕ್ಕೆ ಉತ್ತೇಜನ, ಕೃಷಿಕರ ಪ್ರಗತಿಗೆ ಅನುದಾನ ನೀಡಬೇಕೆಂಬ ಅಪೇಕ್ಷೆಗಳಿವೆ.