ಜಿಲ್ಲೆ

ಆ. 3ರಂದು ವಿದ್ಯುತ್ ವ್ಯತ್ಯಯ

reportermys

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಸಂತೆಮರಹಳ್ಳಿ ಉಪವಿಭಾಗ ವ್ಯಾಪ್ತಿಯ ನವೋದಯ ಫೀಡರ್ ಹಾಗೂ ಮಸಣಾಪುರ ಎನ್.ಜೆ.ವೈ ಫೀಡರ್‌ಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 3ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನವೋದಯ ಫೀಡರ್ ವ್ಯಾಪ್ತಿಯ ನಾಗವಳ್ಳಿ, ನಲ್ಲೂರು, ಹೊಂಡರಬಾಳು, ಕಾಳಿಕಾಂಭ ಕಾಲೋನಿ, ಕುಂಟುಗುಡಿ ಕಾಲೋನಿ, ಮಾದೇಗೌಡನ ಕೊಪ್ಪಲು, ಕುಂಭೇಶ್ವರ ಕಾಲೋನಿ ಮತ್ತು ಮಸಣಾಪುರ ಎನ್.ಜೆ.ವೈ ಫೀಡರ್ ವ್ಯಾಪ್ತಿಯ ಹೊಂಗನೂರು, ಮಸಣಾಪುರ, ಕಳ್ಳೀಪುರ, ಗಂಗವಾಡಿ, ಇರಸವಾಡಿ, ಸುತ್ತೂರು, ಚಾಟಿಪುರ, ರೇಚಂಬಳ್ಳಿ, ಹೆಚ್. ಮೂಕಳ್ಳಿ, ಬೂದಂಬಳ್ಳಿ, ಹೊಮ್ಮ, ಬೂದಂಬಳ್ಳಿ ಮೋಳೆ, ಗೂಳಿಪುರ, ಜ್ಯೋತಿಗೌಡನಪುರ, ನಂಜರಾಜಪುರ, ಕುರುಬರಹುಂಡಿ, ಕಾಗಲವಾಡಿಮೋಳೆ, ಅಮ್ಮನಪುರ, ನಲ್ಲೂರು, ನಲ್ಲೂರು ಮೋಳೆ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯ ಮತ್ತು ಪಾಲನಾ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.