ಜಿಲ್ಲೆ

ಚೀನಾ ವಿರುದ್ಧ ವೆಂಕಟಯ್ಯಛತ್ರದಲ್ಲಿ ಕಿಡಿ

reportermys

ಚಾಮರಾಜನಗರ: ಗಡಿವಿವಾದ ಸೃಷ್ಟಿಸುತ್ತಿರುವ ಚೀನಾ ವಿರುದ್ಧ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಗ್ರಾಮದ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಸ್ವಾಮಿ ವಿವೇಕಾನಂದ ಪಾಠಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರು ಮೆರವಣಿಗೆ ನಡೆಸಿದರು. ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸುತ್ತಿರುವ ಚೀನಾ ಸೈನಿಕರ ವಿರುದ್ಧ ಧಿಕ್ಕಾರ ಕೂಗಿದರು. ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಘೋಷಣೆ ಕೂಗಿದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಕೃತಿ ದಹಿಸಿದರು. ಗ್ರಾಪಂ ಸದಸ್ಯ ರಂಗಸ್ವಾಮಿ, ಯಜಮಾನ ಚಿಕ್ಕಣ್ಣ, ಅರ್ಚಕರಾದ ಶೇಷಾನಂದಾಚಾರ್, ತಿರುಮಲಾಚಾರ್, ವಿದ್ಯಾರ್ಥಿಗಳಾದ ಪ್ರೇಮ್‌ಕುಮಾರ್, ಮಹೇಶ್, ಆಕಾಶ್, ಮಾನಸಾ, ಮಹಾಲಕ್ಷ್ಮಿ, ಚಂದ್ರಕಲಾ, ಜ್ಯೋತಿ, ಸವಿತಾ ಇತರರು ಭಾಗವಹಿಸಿದ್ದರು.