ಚಾಮರಾಜನಗರ: ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಬುಧವಾರ ಭೇಟಿ ಮಾಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು.
ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಮುಗಿಸಿ ಸಾಯಂಕಾಲ ಶ್ರೀಮಠಕ್ಕೆ ಪಕ್ಷದ ಮುಖಂಡರೊಂದಿಗೆ ತೆರಳಿ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಭೇಟಿ ಮಾಡಿದರು. ಶ್ರೀಗಳು ಪುಟ್ಟರಂಗಶೆಟ್ಟರಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ, ಫಲ ತಾಂಬೂಲ ನೀಡುವ ಮೂಲಕ ಶುಭ ಕೋರಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಮುಖಂಡರಾದ ಆರ್.ಮಹದೇವ್, ಮಹೇಶ್ ಕುದರ್, ಆಲೂರು ಪ್ರದೀಪ್, ಗೋವಿಂದಶೆಟ್ಟಿ, ಶಂಭಪ್ಪ, ಶೇಖರಪ್ಪ, ಮಹದೇವ್, ನಾಗವಳ್ಳಿ ನಾಗಯ್ಯ, ಕೆಲ್ಲಂಬಳ್ಳಿ ನಾಗೇಂದ್ರ, ಸಿ.ಎ.ಮಹದೇವಶೆಟ್ಟಿ ಇತರರಿದ್ದರು.