ಗುಂಡ್ಲುಪೇಟೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ದೇವಸ್ಥಾನ ಜೀರ್ಣೊದ್ಧಾರ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಗುರುವಾರ ಗುದ್ದಲಿಪೂಜೆ ನೆರವೇರಿಸಿದರು.
ತಾಲೂಕಿನ ಅಗತಗೌಡನಹಳ್ಳಿ, ಮಳವಳ್ಳಿ, ನೇನೆಕಟ್ಟೆ, ವೀರನಪುರ ,ಚೆನ್ನಜಯ್ಯನಹುಂಡಿ, ಅಂಕಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ಬೆಟ್ಟಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ, ಸರ್ಕಾರಿ ಶಾಲೆ ಹೆಚ್ಚುವರಿ ಕಟ್ಟಡ ನಿರ್ಮಾಣ ಹಾಗೂ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕೆ.ಎಸ್.ಮಹೇಶ್, ಗ್ರಾ.ಪಂ ಅದ್ಯಕ್ಷ ಸುರೇಶ್, ಉಪಾದ್ಯಕ್ಷೆ ಶಿವನಾಗಮ್ಮ ಗ್ರಾ.ಪಂ ಸದಸ್ಯ, ರಾಜೇಶ್, ಸಿದ್ದಪ್ಪ, ಸಂತೋಷ,ದಿನೇಶ್, ಪ್ರಕಾಶ, ಮಂಜು, ಚೆನ್ನಪ್ಪ, ಗಂಗಾಧರಪ್ಪ, ನಾಗಮಲ್ಲಪ್ಪ, ಗುರುಪ್ರಸಾದ್, ಚಂದ್ರು, ಮಲ್ಲು ಚೆನ್ನಜಯ್ಯನಹುಂಡಿ, ಕೆಂಪರಾಜು ಹಾಗೂ ಇತರರು ಭಾಗವಹಿಸಿದ್ದರು.