ಚಾಮರಾಜನಗರ: ತಾಲೂಕಿನ ದೇಮಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಾನಸ ಸಿಕ್ರಂ ಜಿಲ್ಲಾ ಸಂಪನ್ಮೂಲ ಕೇಂದ್ರ ವತಿಯಿಂದ ಗುರುವಾರ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.
ಮಾನಸ ಸಿಕ್ರಿಂ ಜಿಲ್ಲಾ ಸಂಯೋಜಕ ಕೆ.ಸಿ.ರೇವಣ್ಣ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಸಮಾಜದಲ್ಲಿ ಮುಖ್ಯ ವಾಹಿನಿಗೆ ತರಲು ಆಸ್ತಿಯಲ್ಲಿ ಹಕ್ಕು, ಶಿಕ್ಷಣ, ರಾಜಕೀಯವಾಗಿ ಮೀಸಲಾತಿ ಎಲ್ಲ ಸೌಲಭ್ಯವನ್ನು ಸರ್ಕಾರ ಒದಗಿಸಿಕೊಟ್ಟಿದೆ. ಇದನ್ನು ಸದುಪಯೋಗಪಡಿಸಿಕೊಂಡು ಪುರುಷರಿಗೆ ಸಮಾನವಾಗಿ ಬೆಳೆಯಬೇಕೆಂದು ಮಹಿಳೆಯರಿಗೆ ಕರೆ ನೀಡಿದರು.
ಸಹಕಾರ ಸಂಘದ ಮಾಜಿ ಅಧ್ಯಕ್ಷೆ ರಾಜಮ್ಮ, ಅಂಗನವಾಡಿ ಕೇಂದ್ರದ ನಂಜಮ್ಮ, ರಾಜಮ್ಮ, ವಕೀಲ ಕುದೇರು ನಾಗರಾಜು, ಮುಖಂಡರಾದ ದೇಮಹಳ್ಳಿ ಶಿವಕುಮಾರ್, ಮಹಿಳಾ ಸಂಘದ ಅಧ್ಯಕ್ಷರು, ಸದಸ್ಯರು ಮತ್ತು ಇತರರು ಹಾಜರಿದ್ದರು.