ಜಿಲ್ಲೆ

ಸಫಾಯಿ ಕರ್ಮಚಾರಿ ಸಮಾಲೋಚನಾ ಸಭೆ

ಎ.ಎಸ್.ಮಣಿಕಂಠ

ಚಾಮರಾಜನಗರ: ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ಮೈಸೂರು ವಿಭಾಗ ಮಟ್ಟದ ಸಮಾಲೋಚನಾ ಸಭೆಯನ್ನು ಮಂಗಳವಾರ ಆಯೋಜಿಸಲಾಗಿತ್ತು.

ನಗರದ ಸಿಡಿಎಸ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾವಲು ಸಮಿತಿಯ ರಾಜ್ಯ ಸಂಚಾಲಕ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ಸದಸ್ಯ ಓಬಳೇಶ್ ಮಾತನಾಡಿ, ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಹಿತದೃಷ್ಠಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಶ್ರಮಿಸುತ್ತಿದೆ. ಈ ಸಮಿತಿಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಮೈಸೂರು ವಿಭಾಗ ಮಟ್ಟದಲ್ಲಿ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯ ಪದಾಧಿಕಾರಿಗಳನ್ನು ಸಮಿತಿಗೆ ನೇಮಿಸಲಾಯಿತು.

ಈ ವೇಳೆ ಕವಿ ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಸಮಿತಿ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಎಸ್.ಕುಮಾರ್, ಬೆಳಗೊಳ ಆರ‌್ಮುಗಂ ಬಿ.ಆರ್.ಶ್ರೀನಿವಾಸ್, ತಾರಾ ಪಂಡವಪುರ, ಎಂ.ರಾಜೇಂದ್ರ, ಕೊಡಗು ಆರ್.ರಂಗಸ್ವಾಮಿ, ಪಿ.ರಂಗಸ್ವಾಮಿ, ರಾಮಚಂದ್ರಪ್ಪ, ಮುರುಗೇಶ್ ವಿರಾಜಪೇಟೆ, ರಂಗಸ್ವಾಮಿ ಮಂಗಳೂರು, ಮಹದೇವ್, ಸೋಮ ಕೆ.ಆರ್.ಪೇಟೆ, ನಂಜಪ್ಪ, ಬಸವನಗುಡಿ, ಮುರುಗೇಶ್ ಹುಣಸೂರು ಇತರರು ಹಾಜರಿದ್ದರು.