ಚಾಮರಾಜನಗರ:ತಾಲೂಕಿನ 43 ಗ್ರಾ.ಪಂ ಗಳ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು.
ನಗರದ ಶ್ರೀ ಗುರುರಾಘವೇಂದ್ರ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ ಚುನಾವಣಾ ಆಯೋಗದ ನಿಯಮಾನುಸಾರ ತಾಲೂಕಿನ 43 ಗ್ರಾ.ಪಂಗಳ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ. ಯಾರಿಗಾದರೂ ಇದರಲ್ಲಿ ಆಕ್ಷೇಪಣೆಗಳು ಇದ್ದಲ್ಲಿ, ಈ ಕುರಿತು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
22 ಮಹಿಳೆ, 11 ಸಾಮಾನ್ಯ: ತಾಲೂಕಿನ 43 ಗ್ರಾ.ಪಂಗಳಿಗೆ ನಿಗದಿಯಾದ ಮೀಸಲಾತಿಯಲ್ಲಿ 22 ಮಹಿಳೆ, 11 ಸಾಮಾನ್ಯ, ಎಸ್‌ಸಿ 6, ಎಸ್‌ಟಿ 2. ಪ್ರವರ್ಗ-ಎ ಮತ್ತು ಬಿ ತಲಾ 1 ನಿಗದಿ ಮಾಡಲಾಗಿದೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ತಹಸೀಲ್ದಾರ್ ಬಸವರಾಜ್ ಹಾಗೂ ಇತರರು ಉಪಸ್ಥಿರಿದ್ದರು.
ಯಾವ ಗ್ರಾ.ಪಂಗೆ, ಯಾವ ಮೀಸಲು: ಬದನಗುಪ್ಪೆ ಗ್ರಾ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದರೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಹೆಗ್ಗೋಠಾರ ಅಧ್ಯಕ್ಷ ಸ್ಥಾನ ಎಸ್ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ. ಶಿವಪುರ ಅಧ್ಯಕ್ಷ ಸ್ಥಾನ ಎಸ್ಟಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ. ದೊಡ್ಡಮೋಳೆ ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ, ಮಂಗಲ ಸಾಮಾನ್ಯ ಮತ್ತು ಸಾಮಾನ್ಯಮಹಿಳೆ, ಭೋಗಾಪುರ ಎಸ್ಸಿ ಮಹಿಳೆ ಮತ್ತು ಸಾಮಾನ್ಯ, ಮಾದಾಪುರ ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ, ಕುಡ್ಲೂರು ಎಸ್ಟಿ ಮತ್ತು ಸಾಮಾನ್ಯ ಮಹಿಳೆ, ಹರವೆ ಗ್ರಾ.ಪಂ ಸಾಮಾನ್ಯ ಮತ್ತು ಎಸ್ಸಿ ಮಹಿಳೆ, ಗೋವಿಂದವಾಡಿ(ಕಲ್ಪುರ) ಸಾಮಾನ್ಯ ಮಹಿಳೆ ಮತ್ತು ಎಸ್ಟಿ ಮಹಿಳೆ, ಹೊನ್ನಹಳ್ಳಿ ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ, ಮಲೆಯೂರು ಪ್ರವರ್ಗ ಎ ಮಹಿಳೆ ಮತ್ತು ಎಸ್ಸಿ, ಮುಕ್ಕಡಹಳ್ಳಿ ಎಸ್ಟಿ ಮಹಿಳೆ ಮತ್ತು ಸಾಮಾನ್ಯ, ಕುಲಗಾಣ ಪ್ರವರ್ಗ ಎ, ಎಸ್ಸಿ ಮಹಿಳೆ, ಸಾಗಡೆ ಸಾಮಾನ್ಯ ಮತ್ತು ಎಸ್ಸಿ ಮಹಿಳೆ, ಉಡಿಗಾಲ ಸಾಮಾನ್ಯ ಮತ್ತು ಎಸ್ಟಿ, ಕೊತ್ತಲವಾಡಿ ಪ್ರವರ್ಗ ಎ ಮಹಿಳೆ ಮತ್ತು ಎಸ್ಸಿ, ನಂಜೇದೇವನಪುರ ಸಾಮಾನ್ಯ ಮತ್ತು ಪ್ರವರ್ಗ ಬಿ, ಹರದನಹಳ್ಳಿ ಸಾಮಾನ್ಯ ಮತ್ತು ಎಸ್ಸಿ ಮಹಿಳೆ, ವೆಂಟಯ್ಯನಛತ್ರ ಸಾಮಾನ್ಯ ಮಹಿಳೆ ಮತ್ತು ಎಸ್ಸಿ, ಬಿಸಲವಾಡಿ ಎಸ್ಸಿ ಮತ್ತು ಪ್ರವರ್ಗ ಎ ಮಹಿಳೆ, ಅಮಚವಾಡಿ ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ಹಾಗೂ ಅರಕಲವಾಡಿ ಗ್ರಾ.ಪಂಗೆ ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ಮೀಸಲಾತಿ ನಿಗದಿ ಪಡಿಸಲಾಗಿದೆ.
ಆಲೂರು ಗ್ರಾ.ಪಂಯ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರವರ್ಗ ಎ ಮಹಿಳೆ ಮೀಸಲಾತಿ ನಿಗದಿಯಾಗಿದೆ. ಅದರಂತೆ ಯರಗನಹಳ್ಳಿ ಪ್ರವರ್ಗ ಬಿ ಮತ್ತು ಎಸ್ಟಿ ಮಹಿಳೆ, ಚಂದಕವಾಡಿ ಸಾಮಾನ್ಯ ಮತ್ತು ಎಸ್ಸಿ ಮಹಿಳೆ, ನಾಗವಳ್ಳಿ ಎಸ್ಸಿ ಮಹಿಳೆ ಮತ್ತು ಸಾಮಾನ್ಯ, ಕಾಗಲವಾಡಿ ಎಸ್ಸಿ ಮತ್ತು ಸಾಮಾನ್ಯ ಮಹಿಳೆ, ಜ್ಯೋತಿಗೌಡನಪುರ ಸಾಮಾನ್ಯ ಮಹಿಳೆ ಮತ್ತು ಎಸ್ಸಿ, ಹೆಬ್ಬಸೂರು ಎಸ್ಟಿ ಮಹಿಳೆ ಮತ್ತು ಸಾಮಾನ್ಯ, ಅಟ್ಟಗೂಳಿಪುರ ಎಸ್ಟಿ ಮಹಿಳೆ ಮತ್ತು ಸಾಮಾನ್ಯ, ಪುಣಜನೂರು ಎಸ್ಸಿ ಮಹಿಳೆ ಮತ್ತು ಸಾಮಾನ್ಯ, ಉಮ್ಮತ್ತೂರು ಸಾಮಾನ್ಯ ಮಹಿಳೆ ಮತ್ತು ಪ್ರವರ್ಗ ಎ, ಬಾಗಳಿ ಎಸ್ಸಿ ಮಹಿಳೆ ಮತ್ತು ಸಾಮಾನ್ಯ, ಕುದೇರು ಎಸ್ಸಿ ಮಹಿಳೆ ಮತ್ತು ಸಾಮಾನ್ಯ, ನವಿಲೂರು ಎಸ್ಸಿ ಮತ್ತು ಸಾಮಾನ್ಯ ಮಹಿಳೆ, ದೇಮಹಳ್ಳಿ ಸಾಮಾನ್ಯ ಮತ್ತು ಎಸ್ಟಿ ಮಹಿಳೆ, ಸಂತೇಮರಹಳ್ಳಿ ಸಾಮಾನ್ಯ ಮಹಿಳೆ ಮತ್ತು ಎಸ್ಟಿ, ಕೆಂಪನಪುರ ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ, ಹೊಂಗನೂರು ಸಾಮಾನ್ಯ ಮಹಿಳೆ ಮತ್ತು ಎಸ್ಸಿ, ಮಸಣಾಪುರ ಹಾಗೂ ಇರಸವಾಡಿ ಗ್ರಾ.ಪಂಗಳಿಗೆ ಅಧ್ಯಕ್ಷ ಸ್ಥಾನ ಎಸ್ಸಿ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಗೊಳಿಸಲಾಗಿದೆ.