ಚಾಮರಾಜನಗರ : ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆಯು ಶ್ರೀಮಲೆ ಮಹದೇಶ್ವರ ಬೆಟ್ಟದ ಕಾಡಿನಲ್ಲಿರುವ ತೊಳಸಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಮೊದಲಿಗೆ ಆಕಾಶಕಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೂ ಸಹ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎ.ಎಸ್.ಅಭಿಷೇಕ್ ಮಾಹಿತಿ ನೀಡಿದರು. ಬಳಿಕ ಅತ್ಯಾಧುನಿಕ ದೂರದರ್ಶಕವನ್ನು ಬಳಸಿ ಆಕಾಶದಲ್ಲಿ ಶನಿ ಗ್ರಹದ ಉಂಗುರಗಳು, ನಕ್ಷತ್ರಪುಂಜಗಳು, ಚಂದ್ರನ ಕುಳಿಗಳು ಸೇರಿದಂತೆ ಅನೇಕ ಆಕಾಶಕಾಯಗಳನ್ನು ದೂರದರ್ಶಕ ಮುಖಾಂತರ ಮಕ್ಕಳು ವೀಕ್ಷಿಸಿದರು. ಸಂಸ್ಥೆಯ ವತಿಯಿಂದ ಶಾಲೆಗೆ ಇಸ್ರೋ ಸಂಸ್ಥೆಯು ಪ್ರಕಟಿಸಿದ ಪುಸ್ತಕಗಳನ್ನು ಕೊಡುಗೆ ನೀಡಲಾಯಿತು.