ಜಿಲ್ಲೆ

ಕಂಚುಗಾರನಕಟ್ಟೆ ಉಳಿಸುವಂತೆ ಎಡಿಸಿಗೆ ಮನವಿ

ಚಾಮರಾಜನಗರ: ನಗರದ ಸೋಮವಾರಪೇಟೆ ಗ್ರಾಮಕ್ಕೆ ಸೇರಿರುವ ಕಂಚುಗಾರನಕಟ್ಟೆ ಉಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಮನವಿ ಸಲ್ಲಿಸಿದ ಗ್ರಾಮಸ್ಥರು, ಗಾಳೀಪುರ ಸರ್ವೇ ನಂ.60 ರಲ್ಲಿ 1.17 ಗುಂಟೆ ವಿಸ್ತೀರ್ಣದಲ್ಲಿ ಕಂಚುಗಾರನಕಟ್ಟೆ ಇದ್ದು, ಇದು ಸೋಮವಾರಪೇಟೆ ಗ್ರಾಮಕ್ಕೆ ಸೇರಿದೆ. ಈ ಕಟ್ಟೆ ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗಿತ್ತು. ಆದರೆ, ಈಗ ಇದನ್ನು ಮುಚ್ಚಲಾಗಿದೆ. ಈ ಕಟ್ಟೆಯನ್ನು ಲಾರಿಗಳ ನಿಲ್ದಾಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತಿದೆ.

ಕಟ್ಟೆಯನ್ನು ಉಳಿಸಿ ಲಾರಿ ನಿಲ್ದಾಣವನ್ನು ಬೇರೆಡೆ ಸ್ಥಳಾಂತರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯ ಮಹದೇವಯ್ಯ, ಮುಖಂಡ ಬ್ಯಾಡಮೂಡ್ಲು ಬಸವಣ್ಣ, ಮುಖಂಡರಾದ ಪುಟ್ಟರಾಚಯ್ಯ, ಮಹದೇವಯ್ಯ, ಮಲ್ಲಿಕಾರ್ಜುನಯ್ಯ, ಗುರುಸಿದ್ದ, ಮರಿಸ್ವಾಮಿ, ಬಸವಣ್ಣ, ನಂಜುಂಡಸ್ವಾಮಿ, ರಾಜೇಶ್, ದೊರೆಸ್ವಾಮಿ, ಗುಂಡ ಬಸವರಾಜು ಇತರರು ಭಾಗವಹಿಸಿದ್ದರು.