ಚಾಮರಾಜನಗರ: ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್(ಎಪಿಇಎಸ್) ಮೂಲಕ ಪಡೆಯುವುದಕ್ಕೂ ಗ್ರಾಹಕರಿಗೆ ತೊಡಕು ಉಂಟಾಗುತ್ತಿದ್ದು, ಅಂಗವಿಕಲರು ಹಾಗೂ ಹಿರಿಯ ನಾಗರೀಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ತಾಲೂಕಿನ ಆಲೂರು ಗ್ರಾಮದ ಬ್ಯಾಂಕ್ ಆ್ ಬರೋಡದಲ್ಲಿ ಈ ಸಮಸ್ಯೆ ಎದುರಾಗಿದೆ. ಎಪಿಇಎಸ್ ಮೂಲಕ ಯಾವುದೇ ಬ್ಯಾಂಕ್ ಗ್ರಾಹಕ ತನ್ನ ಆಧಾರ್ ಕಾರ್ಡ್ ನಂಬರ್ ಬಳಸಿ, ಹೆಬ್ಬೆಟ್ಟು ಗುರುತು ನೀಡುವ ಮೂಲಕ ತನ್ನ ಖಾತೆಯಲ್ಲಿರುವ ಹಣವನ್ನು ನೇರವಾಗಿ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಬ್ಯಾಂಕ್‌ನಲ್ಲಿ ಎಪಿಇಎಸ್ ಸೇವೆಯನ್ನು ಬಂದ್ ಮಾಡಿಕೊಂಡಿದ್ದು, ಖಾತೆ ಹೊಂದಿರುವ ಹಿರಿಯ ನಾಗರೀಕರು ಹಾಗೂ ಅಂಗವಿಕಲರು ತಮ್ಮ ವೃದ್ಧಾಪ್ಯ ವೇತನ ಮತ್ತು ಅಂಗವಿಕಲರ ವೇತನ ಹಾಗೂ ಇನ್ನಿತರೆ ವೈಯಕ್ತಿಕ ಹಣವನ್ನು ಪಡೆಯಲು ಸಮಸ್ಯೆ ಉಂಟಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ಬ್ಯಾಂಕ್ ವಿಲೀನದಿಂದ ಬ್ಯಾಂಕ್ ಆಫ್ ಬರೋಡಾಕ್ಕೆ ವಿಜಯಬ್ಯಾಂಕ್, ದೇನಾ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕ್‌ಗಳು ವಿಲೀನಗೊಂಡವು. ವಿಜಯಬ್ಯಾಂಕ್ ಖಾತೆಯನ್ನು ಹೊಂದಿದ್ದ ಗ್ರಾಹಕರು ಮಾತ್ರ ಬರೋಡ ಬ್ಯಾಂಕ್ ಅಲ್ಲದೇ ಬೇರೆ ಕಡೆಗಳಲ್ಲಿ ಎಇಪಿಎಸ್ ಮೂಲಕ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹಲವಾರು ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ.
ವೃದ್ಧರಿಗೆ ಸಮಸ್ಯೆ:
ಆಲೂರು ಗ್ರಾಮದ ಸಾಕಷ್ಟು ಗ್ರಾಹಕರಿಗೆ ವೃದ್ಧಾಪ್ಯ ವೇತನ ಖಾತೆಗೆ ಜಮಾ ಆಗಿದ್ದರು 5-6 ತಿಂಗಳಾದರೂ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಹಕರ ಮನೆ ಬಾಗಿಲಿಗೆ ಬಂದು ಹಣ ನೀಡುತ್ತಿದ್ದ ಇನ್ನಿತರೆ ಬ್ಯಾಂಕ್‌ಗಳ ಸಂಯೋಜಕರು ಎಪಿಇಎಸ್ ಬಂದ್ ಆಗಿರುವುದರಿಂದ ತಮ್ಮ ಬ್ಯಾಂಕ್‌ನವರನ್ನೇ ಸಂಪರ್ಕಿಸಬೇಕು ಎಂದು ಹೇಳುತ್ತಾರೆ. ಬರೋಡ ಬ್ಯಾಂಕ್‌ನಲ್ಲೂ ಹಲವಾರು ಸಂಯೋಜಕರು ಕಾರ್ಯನಿರ್ವಹಿಸುತ್ತಿದ್ದು, ಇವರು ಅಂಗವಿಕಲ ಮತ್ತು ವೃದ್ಧ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಗ್ರಾಹಕರಿಂದ ಕೇಳಿ ಬಂದಿದೆ.
ಆಲೂರು ಗ್ರಾಮದಲ್ಲಿರುವ ಬ್ಯಾಂಕ್ ಆ್ ಬರೋಡದಲ್ಲಿ ಖಾತೆ ಹೊಂದಿರುವವರು ಎಪಿಇಎಸ್ ಮೂಲಕ ಬೇರೆ ಬ್ಯಾಂಕ್ ಸಂಯೋಜಕರಲ್ಲಿ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ದ್ವಂದ್ವ ನೀತಿಯನ್ನು ತಪ್ಪಿಸಬೇಕು.-ಸಿದ್ದರಾಜು, ಗ್ರಾಹಕ, ಕೋಟಂಬಳ್ಳಿ, ಚಾಮರಾಜನಗರ ಕೆಲವು ಗ್ರಾಹಕರನ್ನು ಎಪಿಇಎಸ್ ಮೂಲಕ ವಂಚನೆ ಮಾಡಲಾಗುತ್ತಿತ್ತು. ಈ ನಿಟ್ಟಿನಲ್ಲಿ ಬ್ಯಾಂಕ್ ಆ್ ಬರೋಡದ ಕೇಂದ್ರ ಕಚೇರಿ ಈ ನಿಲುವು ಕೈಗೊಂಡಿರಬಹುದು. ಈ ಸಮಸ್ಯೆಯನ್ನು ಮೇಲಾಧಿಕಾರಿಗಳೆ ಬಗೆಹರಿಸಬೇಕಿದೆ. ಈ ದೃಷ್ಟಿಯಿಂದಲೇ ನಮ್ಮ ಬ್ಯಾಂಕ್‌ನಿಂದಲೇ ಹೆಚ್ಚಾಗಿ ಸಂಯೋಜಕರನ್ನು ನೇಮಕಮಾಡಲಾಗಿದೆ.-ವಿಠ್ಠಲ್, ಮ್ಯಾನೇಜರ್, ಬ್ಯಾಂಕ್ ಆ್ ಬರೋಡ, ಆಲೂರು ಶಾಖೆ, ಚಾಮರಾಜನಗರ