ಜಿಲ್ಲೆ

ಪಿಎಸಿಸಿ ಅಧ್ಯಕ್ಷರಾಗಿ ನಾಗಸುಂದರ ಆಯ್ಕೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಾಗಸುಂದರ ಮತ್ತು ಉಪಾಧ್ಯಕ್ಷರಾಗಿ ಎ.ಎಂ. ಮಣಿ ಅವಿರೋಧವಾಗಿ ಗುರುವಾರ ಆಯ್ಕೆಯಾದರು.

ಸಂಘದ ಅಧ್ಯಕ್ಷರಾಗಿದ್ದ ಸೋಮಶಂಕರ ಮೂರ್ತಿ, ಉಪಾಧ್ಯಕ್ಷ ಇಂದ್ರೇಶ್‌ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ಘೋಷಣೆಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಾಗಸುಂದರ ಉಪಾಧ್ಯಕ್ಷ ಸ್ಥಾನಕ್ಕೆ ಎ.ಎಂ.ಮಣಿ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಯಾಗಿದ್ದ ಸಹಕಾರ ಅಭಿವೃದ್ದಿ ಅಧಿಕಾರಿ ತ್ಯಾಗರಾಜು ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮಚವಾಡಿ ನಾಗಸುಂದರ್ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಆಬಾರಿ ಯಾಗಿದ್ದೇನೆ. ಎಲ್ಲಾ ನಿರ್ದೇಶಕರ ಸಹಕಾರ ಮತ್ತು ವಿಶ್ವಾಸದೊಂದಿಗೆ ಬ್ಯಾಂಕ್ ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಗ್ರಾಮದಲ್ಲಿ ಸಹಕಾರ ಸಂಘ ಬೆಳೆದಷ್ಟು ರೈತರು ಅಭಿವೃದ್ದಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತ ಕಲ್ಯಾಣಕ್ಕಾಗಿ ಬಿಡುಗಡೆಯಾಗುವ ಅನುದಾನವನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುವ ತೆಗೆ ಸಂಘದಿಂದ ಹೆಚ್ಚಿನ ರೀತಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಬೆಳೆ ಸಾಲ ಸೌಲಭ್ಯ ಕೊಡಿಸುವುದು ನಮ್ಮ ಮೊದಲ ಅದ್ಯತೆಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸೋಮಶಂಕರಮೂರ್ತಿ, ಇಂದ್ರೇಶ್ ಕುಮಾರ್, ನಿರ್ದೇಶಕರಾದ ಕೆಂಪರಾಜೇಆರಸ್, ಬಸವರಾಜು, ಸತೀಶ್, ಕತ್ತಿ ನಾಯಕ, ದೊಡ್ಡಶೆಟ್ಟಿ, ನಂಜುಂಡಸ್ವಾಮಿ, ಮಲ್ಲಾಜಮ್ಮ, ಸರ್ವಮಂಗಳ, ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸತೀಶ್ ಜೋಷಿ, ನೌಕರರು ಇದ್ದರು.