ಚಾಮರಾಜನಗರ: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಗುಂಡ್ಲುಪೇಟೆ ಮಲ್ಲೇಶ್ ಅವರಿಗೆ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹಾಗೂ ಸ್ನೇಹಿತರು ಸನ್ಮಾನಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಮಲ್ಲೇಶ್ ಅವರಿಗೆ ಮೈಸೂರುಪೇಟ ತೊಡಿಸಿ, ಶಾಲು ಹೊದಿಸಿ, ಹಾರಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಿದ ಎಂ.ರಾಮಚಂದ್ರ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಮಲ್ಲೇಶ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ತುಂಬಾ ಸಂತಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಯಸುಂದರ್, ಮುಖಂಡರಾದ ಚಂದಕವಾಡಿ ಕಪಿನಿನಾಯಕ, ಆರ್.ಸುಂದರ್, ಲಿಂಗರಾಜು, ವೇಣುಗೋಪಾಲ್, ಮಲ್ಲರಾಜು, ಶಿವಕುಮಾರ್, ಮಹದೇವನಾಯಕ, ಗೋಪಾಲ್ ಇತರರು ಹಾಜರಿದ್ದರು.