ಜಿಲ್ಲೆ

ಜೋಡಿರಸ್ತೆ ುಟ್‌ಪಾತ್‌ನಲ್ಲಿ ಟೈಲ್ಸ್ ಅಳವಡಿಕೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಸಾಕಷ್ಟು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ.ರಾಚಯ್ಯ ಕಾಂಕ್ರಿಟ್ ಜೋಡಿರಸ್ತೆಯ ುಟ್‌ಪಾತ್‌ಗೆ ಟೈಲ್ಸ್, ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಬಿರುಸಿನಿಂದ ಸಾಗಿದೆ.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ುಟ್‌ಪಾತ್ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದ್ದು, ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಟೈಲ್ಸ್ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ವಾರದಿಂದ ವೇಗ ದೊರೆತಿದೆ. ಈ ಕಾಮಗಾರಿ ಕಳೆದ ಏಳೆಂಟು ತಿಂಗಳ ಹಿಂದೆಯೇ ಪ್ರಾರಂಭವಾಗಿತ್ತಾದರೂ, ಜೆಎಸ್‌ಎಸ್ ಕಾಲೇಜಿನ ಮುಂಭಾಗ ಕಾಮಗಾರಿಯನ್ನು ಮೊಟಕುಗೊಳಿಸಲಾಗಿತ್ತು.

ನಗರಸಭೆಯಿಂದ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ವಿಳಂಬವಾಗುತ್ತಲೇ ುಟ್‌ಪಾತ್‌ಗೆ ಟೈಲ್ಸ್ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರಸ್ತೆ ಬದಿಯ ಚರಂಡಿ ಸ್ಲ್ಯಾಬ್ ಮೇಲೆ ಟೈಲ್ಸ್ ಹಾಗೂ ಕೆಳಭಾಗದಲ್ಲಿ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ.
ಬಿ.ರಾಚಯ್ಯ ಜೋಡಿ ರಸ್ತೆ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ ಸಾಕಷ್ಟು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಅರ್ಧಂಬರ್ಧ ಸ್ಥಿತಿಯಲ್ಲೇ ಇದೆ. ಈಗಿದ್ದೂ ಜೋಡಿ ರಸ್ತೆಯ ುಟ್‌ಪಾತ್ ಕಾಮಗಾರಿಯನ್ನು ಕೈಗೊಂಡಿರುವುದರಿಂದ ಅದೂ ಕೂಡ ಅರೆಬರೆ ಸ್ಥಿತಿಯಲ್ಲೇ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಅದಾಗ್ಯೂ ಸಾಕಷ್ಟು ವಿಳಂಬದ ಬಳಿಕ ುಟ್‌ಪಾತ್‌ಗೆ ಟೈಲ್ಸ್ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಪ್ರಾರಂಭವಾಗಿದೆ.

4 ಕೋಟಿ ವೆಚ್ಚದ ಕಾಮಗಾರಿ:
ಲೋಕಪಯೋಗಿ ಇಲಾಖೆ ವತಿಯಿಂದ ಸುಮಾರು 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಿ.ರಾಚಯ್ಯ ಜೋಡಿ ರಸ್ತೆಯ ುಟ್‌ಪಾತ್‌ಗೆ ಟೈಲ್ಸ್ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಕೈಗೆತ್ತುಕೊಳ್ಳಲಾಗಿದೆ. ಜೋಡಿರಸ್ತೆಯ ಬದಿಯಲ್ಲಿರುವ ಚರಂಡಿ ಸ್ಲ್ಯಾಬ್ ಮೇಲೆ ಟೈಲ್ಸ್ ಹಾಗೂ ಕೆಳಬದಿಯ ಜಾಗದಲ್ಲಿ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ. ರಸ್ತೆ ಸಂಪೂರ್ಣವಾಗಿರುವ ಕಡೆಯಲ್ಲಿ ಮಾತ್ರ ಟೈಲ್ಸ್ ಅಳವಡಿಕೆ ಮಾಡಲಾಗುತ್ತದೆ. ಉಳಿದಂತೆ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಜಾಗದಲ್ಲಿ ಆಗೆಯೇ ಬಿಡಲಾಗುತ್ತದೆ. ುಟ್‌ಪಾತ್‌ಗೆ ಟೈಲ್ಸ್ ಅಳವಡಿಕೆ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ಸಹಕಾರಿಯಾಗುತ್ತದೆ. ಆಗೆಯೇ ಪೌರಕಾರ್ಮಿಕರಿಗೆ ರಸ್ತೆಯಲ್ಲಿನ ಕಸ ತೆಗೆಯಲು ಸುಲಭವಾಗುತ್ತದೆ.