ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಟ್ರೆಂಡ್ ಹೆಚ್ಚಾಗುತ್ತಿದ್ದು, ಗುಂಡ್ಲುಪೇಟೆ ತಾಲೂಕಿನ ಬರ್ಗಿ ಗ್ರಾಮದ ಹಲವಾರು ಯುವಕರು ಶನಿವಾರ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಸಾಗಿದರು.
ಈ ಸಂದರ್ಭದಲ್ಲಿ ಯುವಕ ಮಣಿಕಂಠ ಮಾತನಾಡಿ, ಸುಮಾರು 5 ವರ್ಷಗಳಿಂದಲೂ ಮಲೆಮಹದೇಶ್ವರ ಬೆಟ್ಟಕ್ಕೆ ನಮ್ಮ ಹಿರಿಯರು ಕಾಲ್ನಡಿಗೆ ಮೂಲಕ ಸಾಗುತ್ತಿದ್ದರು. ಇತ್ತೀಚೆಗೆ ಯುವಕರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದೇವೆ. ಒಟ್ಟು ನಾಲ್ಕೂ ತಂಡಗಳಲ್ಲಿ ಸಾಗುತ್ತಿದ್ದು, ಭಾನುವಾರ ದೇವಾಲಯಕ್ಕೆ ಸಾಗುತ್ತೇವೆ ಎಂದು ಹೇಳಿದರು.
ಶತಶತಮಾನಗಳಿಂದ ಶ್ರೀಮಲೆ ಮಹದೇಶ್ವರರನ್ನು ನಮ್ಮ ಹಿರಿಯರು ನಂಬಿಕೊಂಡು, ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುವಂತೆ ಕಷ್ಟದ ಸಮಯದಲ್ಲಿ ಅರಕೆ ಕಟ್ಟಿಕೊಂಡಿರುತ್ತೇವೆ ಅದನ್ನು ಈಗ ಪೂರೈಸುತ್ತಿದ್ದೇವೆ. ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವ ಮಾದಪ್ಪನನ್ನು ನಂಬಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಬಸವರಾಜು, ಮಣಿ, ಪ್ರಕಾಶ್, ಸಿದ್ದರಾಜು, ಮಹೇಶ್, ಮಹದೇವ, ಸತ್ಯ ಹಾಗೂ ಇತರರು ಹಾಜರಿದ್ದರು.