ಸಂತೇಮರಹಳ್ಳಿ: ಇಲ್ಲಿನ ನಾಡ ಕಚೇರಿಗೆ ಶನಿವಾರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿದರು.
ಜಿಲ್ಲಾ ಪ್ರವಾಸದ ಹಿನ್ನೆಲೆ ಚಾಮರಾಜನಗರಕ್ಕೆ ಆಗಮಿಸುತ್ತಿದ್ದ ವೇಳೆ ಸಂತೇಮರಹಳ್ಳಿಯ ನಾಡ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ರೆಕಾರ್ಡ್ ರೂಂನಲ್ಲಿ ಕಡತಗಳನ್ನು ಕಟ್ಟಿ ಇಟ್ಟಿರುವುದನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಲಸಕ್ಕೆ ಬಾರದ ಕಡತಗಳನ್ನು ಕಚೇರಿಯಲ್ಲಿ ಇಡಬಾರದು.
ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಮರುಕಳಿಸಬಾರದು. ರಾಜ್ಯದಲ್ಲಿ 5 ಸಾವಿರ ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯಿತಿಯಾಗಿ ಮಾರ್ಪಟ್ಟಿದೆ. ಖಾಲಿ ಇರುವ ಎಲ್ಲ ಗ್ರಾಮ ಲೆಕ್ಕಿರನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣ ಮೂರ್ತಿ, ಕಂದಾಯ ಇಲಾಖೆ ಆಯುಕ್ತರ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ತಹಸೀಲ್ದಾರ್ ಬಸವರಾಜ್, ಉಪ ತಹಸೀಲ್ದಾರ್, ನಾಗಲಂಬಿಕಾ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.