ಜಿಲ್ಲೆ

ರಾಜೇಶ್ ಕೃಷ್ಣನ್ ಮೋಡಿ

ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಗಾಯಕ ರಾಜೇಶ್ ಕೃಷ್ಣನ್ ಮೋಡಿ ಮಾಡಿದರು.

ವಿವಿಧ ಚಲನಚಿತ್ರದ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಹೊರಟ ಚಿತ್ರದ ’ಯಾರೋ ಕಣ್ಣಲ್ಲಿ ಕಣ್ಣನಿಟ್ಟು’ ಸಿಪಾಯಿ ಚಿತ್ರದ ಏ ರುಕ್ಕಮ್ಮ ಹಾಡು ಹಾಡುವ ಮೂಲಕ ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಶ್ರೀಚಾಮರಾಜೇಶ್ವರ ದೇವಸ್ಥಾನದ ಸುತ್ತಲೂ ಗಡಚಿಕ್ಕುವ ಸಿಳ್ಳೆ, ಕೇಕೆ ನಡುವೆ ಜನರನ್ನು ಹಾಡುವಂತೆ ಮಾಡಿ ರಂಜಿಸಿದರು. ಸುದೀಪ್ ಅಭಿನಯದ ಹುಚ್ಚ ಸಿನಿಮಾದ ಉಸಿರೇ ಉಸಿರೇ ಗೀತೆಯನ್ನು ಹಾಡುವಾಗ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಮತ್ತಷ್ಟು ಸುಮಧುರ ಕನ್ನಡ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಂಗೀತದ ಹೊಲೆಯಲ್ಲಿ ಜನರನ್ನು ತೇಲಿಸಿದರು.