ಜಿಲ್ಲೆ

ಪ್ರೇಕ್ಷಕರನ್ನು ಸೆಳೆದ ಪೌರಾಣಿಕ ನಾಟಕಗಳು

ಎ.ಎಸ್.ಮಣಿಕಂಠ

ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪೌರಾಣಿಕ ನಾಟಕಗಳು ಪ್ರೇಕ್ಷಕರನ್ನು, ಕಲಾ ಆಸಕ್ತರನ್ನು ತನ್ನತ್ತಾ ಸೆಳೆಯಲು ಯಶಸ್ವಿಯಾಯಿತು.

ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದ ವೇದಿಕೆಯಲ್ಲಿ ಶುಕ್ರವಾರ ನಂಜದೇವನಪುರದ ನಂಜುಂಡೇಶ್ವರ ಕಲಾ ಸಂಘದ ವತಿಯಿಂದ ಆಯೋಜಿಸಿದ್ದ ಭಕ್ತ ಪ್ರಹ್ಲಾದ ಪೌರಾಣಿಕ ನಾಟಕ ಮತ್ತು ಜಿಲ್ಲಾ ರಂಗ ಭೂಮಿ ಕಲಾ ಸಂಘದ ಕಲಾವಿದರು ಅಭಿನಯಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕ ನೋಡುಗರ ಗಮನ ಸೆಳೆಯಿತು. ಸಾಕಷ್ಟು ಸಂಖ್ಯೆಯಲ್ಲಿ ನೆರೆದ ಸಾರ್ವಜನಿಕರು ಹಾಗೂ ಕಲಾ ಆಸಕ್ತರು ಪೌರಾಣಿಕ ನಾಟಕಗಳನ್ನು ಕಣ್ತುಂಬಿಕೊಂಡರು.

ಬೆಳಿಗ್ಗೆಯಿಂದ ಸಂಜೆಯವರೆಗೂ ಸಭಾಂಗಣ ಪ್ರೇಕ್ಷಕರಿಂದ ಭರ್ತಿಯಾಗಿತ್ತು.
ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕದಲ್ಲಿ ಕೃಷ್ಣನ ಪಾತ್ರಧಾರಿಯಾಗಿ ಶಿಕ್ಷಕ ಎಸ್.ಪ್ರಕಾಶ್, ಧರ್ಮರಾಯನಾಗಿ ಗೋವಿಂದರಾಜು, ಭೀಮನಾಗಿ ಮಹದೇವಸ್ವಾಮಿ, ಬಲರಾಮ ಮತ್ತು ಅಭಿಮನ್ಯುವಾಗಿ ಅನಿಲ್‌ಕುಮಾರ್, ದುಯೋಧನನಾಗಿ ವಿ.ಮಹದೇವಯ್ಯ, ಕರ್ಣನಾಗಿ ಎಂ.ಎನ್.ಮಹದೇವ್, ನಾರದನಾಗಿ ವೆಂಕಟರಮಣಸ್ವಾಮಿ, ದುಶ್ಯಾಸನನಾಗಿ ಶಿವನಂಜಯ್ಯ, ಶಕುನಿಯಾಗಿ ಮನೋಜ್, ವಿಧುರನಾಗಿ ಸಿದ್ದುಜಂಗಮ, ದೋಣಾಚಾರ್ಯನಾಗಿ ರೇವಣ್ಣ, ಭೀಷ್ಮನಾಗಿ ಶಂಕರಯ್ಯ, ಸೂತ್ರಧಾರಿಯಾಗಿ ಜಯರಾಮ್ ಅದ್ಭುತವಾಗಿ ಅಭಿನಯಿಸಿದರು.