ಚಾಮರಾಜನಗರ: ನಗರದ ಜನಪ್ರಿಯ ಜನಪದ ಹಾಡುಗಾರ ಸಿ.ಎಂ.ನರಸಿಂಹಮೂರ್ತಿ ಮತ್ತು ತಂಡದವರು ನಡೆಸಿಕೊಟ್ಟ ಜನಪದ ಜೇಂಕಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಮಲೆಮಹದೇಶ್ವರನ ಕುರಿತಾದ ಜನಪದ ಗೀತೆಗಳಿಗೆ ನೆರೆದಿದ್ದ ಜನರು ಹುಚ್ಚೆದ್ದು ಕುಣಿದರು. ಗಾಯಕ ಆರ್.ಮಹೇಂದರ್ ಮತ್ತು ತಂಡದವರು ನಡೆಸಿಕೊಟ್ಟ ಸರಿಗಮಪ ಸಂಜೆ ಕಾರ್ಯಕ್ರಮದಲ್ಲಿ ಹಲವು ಸುಂಧುರ ಹಾಡುಗಳು ಮೂಡಿಬಂದವು. ಮಿಮಿಕ್ರಿ ಗೋಪಿ ಮತ್ತು ಉಮ್ಮತ್ತೂರು ಬಸವರಾಜು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.
ಚಾಮರಾಜನಗರದ ಸುಪ್ರಸಿದ್ಧ ಅವತಾರ್ ಡ್ಯನ್ಸ್ ಇನ್ಸ್‌ಟ್ಯೂಟ್, ಗುಂಡ್ಲುಪೇಟೆ ಗೌತಮ್ ಕಾಲೇಜು, ದುಂದಾಸನಪುರ ಸರ್ಕಾರಿ ಐಟಿಐ ಕಾಲೇಜು, ಕಬ್ಬಹಳ್ಳಿ ರಂಜಿತಾ ಸೋಮಶೇಖರ್ ತಂಡ, ಕೊಳ್ಳೇಗಾಲ ಮೋನಿಷ್ ತಂಡ ಹಾಗೂ ಶಿವತಾಂಡವ ಡ್ಯಾನ್ಸ್ ಇನ್ಸ್‌ಟ್ಯೂಟ್ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು.