ಜಿಲ್ಲೆ

ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸೆಸ್ಕ್ ಲೆಕ್ಕಾಧಿಕಾರಿ ಭಾಸ್ಕರ್ ಆಗ್ರಹಿಸಿದರು.

ನಗರದ ಸೆಸ್ಕ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೆ ದೆಹಲಿಯಲ್ಲಿ ನಡೆದ ರ‌್ಯಾಲಿಯಲ್ಲಿ ಭಾಗವಹಿಸಿದ್ದ ಉಪ ವಿಭಾಗದ ಸಹಾಯಕ ಇಂಜಿನಿಯರ್ ಪ್ರವೀಣ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಎನ್‌ಪಿಎಸ್‌ನಲ್ಲಿ ನೌಕರರಿಗೆ ಯಾವುದೇ ಭದ್ರತೆ ಸಿಗುತ್ತಿಲ್ಲ. ಕೆಲವರಿಗೆ ಮಾಸಿಕ ಪಿಂಚಣಿ 1,500 ರೂ.ಗಳಿಂದ 2100 ರೂ. ಮಾತ್ರ ದೊರೆತಿವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗದೆ ತೊಂದರೆಯಲ್ಲಿ ಸಿಲುಕಿದ್ದಾರೆ. ಆದ್ದರಿಂದ ಎನ್‌ಪಿಎಸ್ ಯೋಜನೆ ಕೈ ಬಿಟ್ಟು ಒಪಿಎಸ್ ಯೋಜನೆ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಹಾಯಕ ಇಂಜಿನಿಯರ್ ಸಿದ್ದರಾಜು, ಜಯಪ್ರಕಾಶ್, ಶಿವಶಂಕರ್, ಜೂನಿಯರ್ ಇಂಜಿನಿಯರ್ ರಾಮಚಂದ್ರು, ಮೇಸಿಗಳಾದ ಆರ್.ಡಿ.ನಾಗರಾಜು, ನಾಗೇಂದ್ರ ಮತ್ತು ಇತರರು ಇದ್ದರು.