ಜಿಲ್ಲೆ

ಸಹಕಾರ ಸಂಘದಿಂದ ಹಲವು ಸವಲತ್ತು

ಕಿರಣ್ ಮಾದರಹಳ್ಳಿ

ಚಾಮರಾಜನಗರ : ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಮುನ್ನಡೆಯುವ ಮೂಲಕ ಸಹಕಾರ ಸಂಘದಿಂದ ಹಲವು ಸವಲತ್ತು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಲೆಕ್ಕ ಪರಿಶೋಧಕ ವಿ.ಶೈಲೇಂದ್ರ ಮಾಹಿತಿ ನೀಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ 4 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಪತ್ರಕರ್ತರಾದವರು ಸಮಾಜದ ಮುಖ್ಯವಾಹಿನಿಯಲ್ಲಿದ್ದು, ಅಭಿವೃದ್ಧಿಗಾಗಿ ದುಡಿಯುವವರು. ಸಹಕಾರ ವ್ಯವಸ್ಥೆಯಲ್ಲೂ ಸಂಘ ರಚನೆ ಮಾಡಿಕೊಂಡು ಬೈಲಾ ಪ್ರಕಾರ ನಿವೇಶನಗಳನ್ನು ಪಡೆದುಕೊಳ್ಳುವ ಜತೆಗೆ ಎಲ್ಲ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಮುನ್ನಡೆಯುತ್ತಿರುವುದು ಮೆಚ್ಚುಗೆಯ ಸಂಗತಿ. ಕಳೆದ ಐದು ವರ್ಷಗಳ ಲೆಕ್ಕ ಪತ್ರಗಳು ಹಾಗೂ ಸಂಘದ ಕಾರ್ಯಚಟುವಟಿಕೆ ತೃಪ್ತಿದಾಯಕವಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಸಂಘದ ಉಪಾಧ್ಯಕ್ಷ ಅಮಚವಾಡಿ ರಾಜೇಂದ್ರ, ನಿರ್ದೇಶಕ ಎಂ.ಇ.ಮಂಜುನಾಥ್, ಗೂಳೀಪುರ ನಂದೀಶ್, ಗೌಡಹಳ್ಳಿ ಮಹೇಶ್, ಲಕ್ಕೂರ್ ಪ್ರಸಾದ್, ವಿ.ಗಂಗಾಧರ, ಎನ್.ರವಿಚಂದ್ರ ಇತರರು ಇದ್ದರು.