ಜಿಲ್ಲೆ

ಹೈನುಗಾರಿಕೆಯಿಂದ ಹೆಚ್ಚಿನ ಲಾಭ

ಎ.ಎಸ್.ಮಣಿಕಂಠ

ಚಾಮರಾಜನಗರ: ಮಹಿಳೆಯರ ಅಭಿವೃದ್ದಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಚಾಮುಲ್ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ತಾಲೂಕಿನ ಮೂಡಲ ಅಗ್ರಹಾರ ಗ್ರಾಮದ ಶುಕ್ರವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹಾಲು ಉತ್ಪಾದಕರ ಸಂಘದಿಂದ ನಾಡಿನಲ್ಲಿ ಶೇ.75 ರಷ್ಟು ಮಹಿಳೆಯರು ಅಭಿವೃದ್ದಿ ಹೊಂದಿದ್ದಾರೆ, ಹೈನುಗಾರಿಕೆ ರೈತರಿಗೆ ಲಾಭದಾಯಕ ಉದ್ಯಮವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಮುನ್ನಲೆಯಲ್ಲಿ ಇದ್ದಾರೆ. ಮಹಿಳೆಯರ ಅಭಿವೃದ್ದಿಗೆ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಮೂಡಲ ಅಗ್ರಹಾರದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಪ್ರಾರಂಭವಾಗಿ 23 ವರ್ಷಗಳು ಕಳೆದಿದೆ. ಪ್ರತಿವರ್ಷವು ಹಾಲು ಉತ್ಪಾದಕರಿಗೆ ಅನುಕೂಲವನ್ನೇ ಮಾಡುತ್ತ ಬಂದಿದೆ. ರೈತರು ಹಸುಗಳನ್ನು ಖರೀದಿಸುವುದು ಮುಖ್ಯವಲ್ಲ ಹಸುವಿಗೆ ವಿಮೆ ಮಾಡಿಸಬೇಕು. ಚಾಮುಲ್ ರೈತರ ಅಭಿವೃದ್ದಿಗೆ ಸದಾಕಾಲವೂ ಇರುತ್ತದೆ ಎಂದರು.

ಚಾಮುಲ್ ವಿಸ್ತರಣಾಧಿಕಾರಿ ಪಿ.ರಾಜು ಮಾತನಾಡಿ, ಡೈರಿಗೆ ಹಾಲು ನೀಡುವಾಗ ಗುಣಮಟ್ಟದ ಹಾಲನ್ನು ನೀಡಬೇಕು. ಹಾಸುವಿಗೆ ಹೆಚ್ಚು ನೀರಿನ ಅಂಶವಿರುವ ಆಹಾರವನ್ನು ನೀಡುವುದರಿಂದ ಹಾಲಿನ ಗುಣಾಂಶ ಕಡಿಮೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ನಾಗಮಣಿ ಮಲ್ಲಿಕಾರ್ಜುನಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ರಾಜಮಣ್ಣಿ ಪುಟ್ಟಸ್ವಾಮಿ, ಉಪಾಧ್ಯಕ್ಷೆ ಜಯಂತಿ, ನಿರ್ದೇಶಕಿ ಕಮಲಮ್ಮ, ಶಂಕರಮ್ಮ, ಗಂಗಮ್ಮಣ್ಣಿ, ನಿಂಗಮಣಿ, ರಾಜಮ್ಮ, ಮಲ್ಲಮ್ಮ, ಜ್ಯೋತಿ, ಹಾಲು ಪರೀಕ್ಷಕಿ ಶಕುಂತಲ ಉಪಸ್ಥಿತರಿಸರು.