ಕೊಳ್ಳೇಗಾಲ: ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಶಿಕ್ಟಣ ಇಲಾಖೆಯ ನಿವೃತ್ತ ನಿರ್ದೇಶಕ ಮಂಜುನಾಥ್ ತಿಳಿಸಿದರು.
ಪಟ್ಟಣದ ಲಯನ್ಸ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅಭಿಯಂತರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಹಾಗೂ ಅಭಿಯಂತರರಿಂದ ದೇಶದ ಪ್ರಗತಿ ಸಾಧ್ಯ. ಉತ್ತಮ ಶಿಕ್ಷಕರು ಅನೇಕ ಉತ್ತಮ ಪ್ರಜೆಗಳನ್ನು ರೂಪಿಸುತ್ತಾರೆ. ನಾವು ಕೂಡ ಶಿಕ್ಷಕರಿಂದಲೇ ಪಾಠ ಪ್ರವಚನ ಕಲಿತು ಇಂದು ಉತ್ತಮ ಸ್ಥಾನದಲ್ಲಿ ಇದ್ದೇವೆ. ಶಿಕ್ಷಕ ವೃತ್ತ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ಶಿಕ್ಷಕರು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಮಾದೇಶಪ್ಪ, ಗುರುಸಿದ್ದಮ್ಮ ಹಾಗೂ ನಿವೃತ್ತ ಅಭಿಯಂತರ ಸಿದ್ದಪ್ಪಾಜಿಗೌಡ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆಯಲ್ಲಿ ನೂತನ ಸದಸ್ಯರು ಲಯನ್ಸ್ ಕ್ಲಬ್ ಗೆ ಸೇರ್ಪಡೆಯಾದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವೆಂಕಟೇಶ್ ಬಾಬು, ಕಾರ್ಯದರ್ಶಿ ಸಿ.ಚೇತನ್, ಖಜಾಂಚಿ ಇಂದ್ರೇಶ್, ನಿಕಟಪೂರ್ವ ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು ಹಾಗೂ ಪದಾಧಿಕಾರಿಗಳು ಹಾಜರಿದ್ದರು.